ADVERTISEMENT

ಕೇಂದ್ರದ ಆರ್ಥಿಕ ಪ್ಯಾಕೇಜ್‌ ಭರವಸೆ: ಸೆನ್ಸೆಕ್ಸ್‌ 700 ಅಂಶ ಚೇತರಿಕೆ

ಏಜೆನ್ಸೀಸ್
Published 13 ಮೇ 2020, 5:35 IST
Last Updated 13 ಮೇ 2020, 5:35 IST
ಷೇರುಪೇಟೆ ವಹಿವಾಟು–ಸಾಂಕೇತಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂಕೇತಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಪಿಡುಗಿನಿಂದ ತತ್ತರಿಸಿರುವ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಸುಮಾರು ₹20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಬುಧವಾರ ದೇಶದ ಷೇರುಪೇಟೆಗಳಲ್ಲಿ ಚೇತರಿಕೆ ಕಂಡು ಬಂದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 719.26 ಅಂಶ (ಶೇ 2.29) ಹೆಚ್ಚಳವಾಗಿ 32,090.38 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 213.95 ಅಂಶ ಏರಿಕೆಯೊಂದಿಗೆ 9,410.50 ಅಂಶಗಳಲ್ಲಿ ವಹಿವಾಟು ನಡೆದಿದೆ.

ಆಟೊ ಮತ್ತು ಹಣಕಾಸು ವಲಯದ ಷೇರುಗಳು ಗಳಿಕೆ ದಾಖಲಿಸಿವೆ. ಐಸಿಐಸಿಐ ಬ್ಯಾಂಕ್‌, ಮಾರುತಿ ಸುಜುಕಿ, ವೇದಾಂತ, ರಿಲಯನ್ಸ್‌, ಇನ್ಫೊಸಿಸ್‌, ಎಚ್‌ಡಿಎಫ್‌ಸಿ, ಎಸ್‌ಬಿಐ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳು ಸಕಾರಾತ್ಮಕ ವಹಿವಾಟು ಕಂಡಿವೆ. ಈ ಷೇರುಗಳು ಶೇ 2ರಿಂದ ಶೇ 6ರ ವರೆಗೂ ಹೆಚ್ಚಳವಾಗಿದೆ.

ADVERTISEMENT

ಮಂಗಳವಾರ ಸೆನ್ಸೆಕ್ಸ್‌ ಅಂತಿಮವಾಗಿ 190 ಅಂಶಗಳ ಇಳಿಕೆಯೊಂದಿಗೆ 31,371 ಅಂಶಗಳಿಗೆ ತಲುಪಿತು. ನಿಫ್ಟಿ 43 ಅಂಶ ಇಳಿಕೆ ಕಂಡು 9,196ಕ್ಕೆ ತಲುಪಿತು. ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ 6ರಷ್ಟು ಗರಿಷ್ಠ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.