
ಖಾಸಗಿ ವಲಯದ ಆರ್‌ಬಿಎಲ್ ಬ್ಯಾಂಕ್‌ನ ಷೇರಿನ ಬೆಲೆ ₹350 ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.
ದುಬೈ ಮೂಲದ ಎಮಿರೇಟ್ಸ್ ಎನ್‌ಬಿಡಿ ಸಂಸ್ಥೆಯು, ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು ಬ್ಯಾಂಕ್‌ನ ಮುನ್ನೋಟವನ್ನು ಸದೃಢಗೊಳಿಸಲಿದೆ.
ಎನ್‌ಡಿಬಿ ಪಾಲುದಾರಿಕೆಯಿಂದ ಬ್ಯಾಂಕ್‌ನ ರಿಟೇಲ್, ಎಸ್‌ಎಂಇ, ಎನ್‌ಆರ್‌ಐ ಬ್ಯಾಂಕಿಂಗ್ ಮತ್ತು ಗಡಿಯಾಚೆಗಿನ ವಹಿವಾಟು ವೇಗವಾಗಿ ವಿಸ್ತರಿಸಲು ಅನುವು ಆಗುತ್ತದೆ.
ಎಂಎಸ್‌ಎಂಇ, ಚಿನ್ನದ ಸಾಲ, ಟ್ರ್ಯಾಕ್ಟರ್, ಕೈಗೆಟಕುವ ದರದ ಮನೆಗಳ ಖರೀದಿಗೆ ನೀಡುವ ಸಾಲ ಮತ್ತು ವ್ಯಾಪಾರಕ್ಕೆ ಸಾಲ ನೀಡುವುದರಿಂದ ಬ್ಯಾಂಕ್ ಶಿಸ್ತುಬದ್ಧವಾದ ಬೆಳವಣಿಗೆ ಕಾಣಲಿದೆ. ಆರೋಗ್ಯಕರ ಸ್ಥಿತಿಯಲ್ಲಿರುವ ಲೆಕ್ಕಪತ್ರ, ಇಎನ್‌ಡಿಬಿ ಬೆಂಬಲದ ಕಾರಣದಿಂದಾಗಿ ಬ್ಯಾಂಕ್ ಸದೃಢವಾದ, ಹೆಚ್ಚು ವೈವಿಧ್ಯಮಯ ಮತ್ತು ಲಾಭದಾಯಕ ಬೆಳವಣಿಗೆಯನ್ನು ಕಾಣಲಿದೆ ಎಂದು ಹೇಳಿದೆ.
ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಆರ್‌ಬಿಎಲ್ ಬ್ಯಾಂಕ್‌ನ ಷೇರಿನ ಬೆಲೆ ₹302 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.