
ಮುಂಬೈ: ಸತತ ಮೂರನೇ ದಿನವೂ ದೇಶೀಯ ಷೇರುಪೇಟೆ ಸೂಚ್ಯಂಕಗಳಲ್ಲಿ ಕುಸಿತ ಕಂಡುಬಂದಿದೆ. ವಿದೇಶಿ ಬಂಡವಾಳದ ಹೊರ ಹರಿವು ಮತ್ತು ದೇಶೀಯವಾಗಿ ಯಾವುದೇ ಉತ್ತೇಜನ ಇಲ್ಲದ್ದು ಈ ಕುಸಿತಕ್ಕೆ ಕಾರಣವಾಗಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 367.25 ಅಂಶಗಳಷ್ಟು ಕುಸಿದು 85,041.45ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಾಟಿನಲ್ಲಿ 470.88 ಅಂಶಗಳಷ್ಟು ಕುಸಿದು 84,937.82ಕ್ಕೆ ತಲುಪಿತ್ತು.
ಸತತ ಎರಡನೇ ದಿನವೂ 50 ಷೇರುಗಳ ಎನ್‌ಎಸ್‌ಇ ನಿಫ್ಟಿ ಕುಸಿತ ಕಂಡಿದೆ. 99.80 ಅಂಶ ಕುಸಿದು 26,042.30ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಬಿಎಸ್‌ಇ ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್, ಏಷಿಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಟರ್ನಲ್ ಮತ್ತು ಸನ್ ಫಾರ್ಮಾ ಅತಿ ಹೆಚ್ಚು ಕುಸಿತ ಕಂಡಿವೆ.
ಆದರೂ, ಟೈಟನ್, ಆ್ಯಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಅಲ್ಟ್ರಾ ಟೆಕ್ ಸಿಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಿಂದೂಸ್ಥಾನ್ ಯುನಿಲಿವರ್ ಷೇರುಗಳು ಲಾಭ ಗಳಿಸಿವೆ.
ಏಷ್ಯಾ ಷೇರುಪೇಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನನ ನಿಕ್ಕಿ 225 ಸೂಚ್ಯಂಕ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕಗಳು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ₹1,721.26 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹2,381.34 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಕಚ್ಚಾ ತೈಲ ದರವು ಬ್ಯಾರಲ್‌ಗೆ 62.43 ಡಾಲರ್‌ಗೆ ಏರಿಕೆಯಾಗಿದೆ.