ADVERTISEMENT

ಸೂಚ್ಯಂಕ ಇಳಿಕೆ: ಕರಗಿತು ₹ 1.65 ಲಕ್ಷ ಕೋಟಿ

ಯೆಸ್‌ ಬ್ಯಾಂಕ್‌ ಷೇರು ಶೇ 15.52ರಷ್ಟು ಗರಿಷ್ಠ ಇಳಿಕೆ

ಪಿಟಿಐ
Published 19 ಸೆಪ್ಟೆಂಬರ್ 2019, 18:42 IST
Last Updated 19 ಸೆಪ್ಟೆಂಬರ್ 2019, 18:42 IST
   

ಮುಂಬೈ:ದೇಶದ ಷೇರುಪೇಟೆಗಳಲ್ಲಿ ಗುರುವಾರ ಮಾರಾಟದ ಒತ್ತಡ ಕಂಡುಬಂದು,‌ಸೂಚ್ಯಂಕಗಳು ಇಳಿಕೆ ಕಂಡವು.ವಿದೇಶಿ ಬಂಡವಾಳ ಹೊರಹರಿವು ಮತ್ತು ಜಾಗತಿಕ ವಿದ್ಯಮಾನಗಳಿಂದಾಗಿನಕಾರಾತ್ಮಕ ವಹಿವಾಟು ನಡೆಯುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 470 ಅಂಶ ಇಳಿಕೆ ಕಂಡು 36,093 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 1.65 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ₹ 138.54 ಲಕ್ಷ ಕೊಟಿಗೆ ಇಳಿಕೆಯಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 135 ಅಂಶ ಇಳಿಕೆಯಾಗಿ 10,704 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಯೆಸ್‌ ಬ್ಯಾಂಕ್‌ ಷೇರು ಶೇ 15.52ರಷ್ಟು ಗರಿಷ್ಠ ನಷ್ಟ ಕಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 3.59ರವರೆಗೆ ಇಳಿಕೆ ಕಂಡಿವೆ.

ಟಾಟಾ ಸ್ಟೀಲ್‌, ಮಾರುತಿ, ಎಸ್‌ಬಿಐ, ರಿಲಯನ್ಸ್‌, ಟೆಕ್‌ ಮಹೀಂದ್ರಾ, ಒನ್‌ಜಿಸಿ, ವೇದಾಂತ, ಬಜಾಜ್ ಫೈನಾನ್ಸ್‌, ಹೀರೊಮೋಟೊಕಾರ್ಪ್‌ ಮತ್ತು ಟಿಸಿಎಸ್ ಷೇರುಗಳು ಶೇ 3.66ರವರೆಗೂ ಇಳಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.