ADVERTISEMENT

ಸೆನ್ಸೆಕ್ಸ್, ನಿಫ್ಟಿ ಆರಂಭಿಕ ಕುಸಿತ

ಪಿಟಿಐ
Published 2 ಮಾರ್ಚ್ 2023, 6:50 IST
Last Updated 2 ಮಾರ್ಚ್ 2023, 6:50 IST
   

ಮುಂಬೈ: ವಹಿವಾಟಿನ ಜಾಗತಿಕ ಅಸಮತೋಲನ ಮತ್ತು ವಿದೇಶಿ ಹಣಕಾಸಿನ ಹೊರಹರಿವಿನ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಗುರುವಾರ ಆರಂಭಿಕ ವಹಿವಾಟು ಕುಸಿದಿದೆ.

ಷೇರು ವಿನಿಮಯದಲ್ಲಿ ಮಾರುಕಟ್ಟೆಯ ಸೆಸ್ಸೆಕ್ಸ್ ಸೂಚ್ಯಂಕ 145.4 ಅಂಕ ಕುಸಿದು 59,265.68ಕ್ಕೆ ತಲುಪಿದೆ. ಇನ್ನು ನಿಫ್ಟಿ ಸೂಚ್ಯಂಕ 47.95 ಅಂಕ ಇಳಿದು 17,402.95ಕ್ಕೆ ತಗ್ಗಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಮಾರುತಿ, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್, ನೆಸ್ಲೆ, ಏಷ್ಯನ್ ಪೇಂಟ್ಸ್ ಮತ್ತು ಬಜಾಜ್ ಫೈನಾನ್ಸ್‌ನ ಷೇರುಗಳು ಪ್ರಮುಖವಾಗಿ ಹಿಂದುಳಿದಿವೆ. ಬಜಾಜ್ ಫಿನ್‌ಸರ್ವ್, ಲಾರ್ಸನ್ ಆಂಡ್ ಟೂಬ್ರೊ, ಟಾಟಾ ಸ್ಟೀಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಾಭ ಗಳಿಸಿ ಮುನ್ನುಗ್ಗುತ್ತಿವೆ.

ADVERTISEMENT

ಏಷ್ಯಾದ ಒಟ್ಟು ಷೇರು ಮಾರುಕಟ್ಟೆಗಳಲ್ಲಿ ಜಪಾನ್‌ ಮತ್ತು ಹಾಂಕಾಂಗ್ ನಿಯಮಿತ ವಹಿವಾಟು ನಡೆಸುತ್ತಿದ್ದರೆ, ಚೀನಾ ಹಾಗೂ ದಕ್ಷಿಣ ಕೊರಿಯಾ ಹೆಚ್ಚಿನ ಹಣಕಾಸು ತೊಡಗಿಸುತ್ತಿವೆ. ಅಮೆರಿಕದ ಮಾರುಕಟ್ಟೆಯಲ್ಲಿ ಬುಧವಾರ ವಹಿವಾಟಿನ ಮಟ್ಟ ಬಹುತೇಕ ತಗ್ಗಿತ್ತು.

‘ಅಮೆರಿಕದ ಬಾಂಡ್‌ ದರದ ಮೇಲೆ ತೊಡಗಿಸುವಿಕೆಯ ಜಾಗತಿಕ ಸಮತೋಲನ ನಿಂತಿದೆ. ಇದು ಭಾರತದಂಥ ದೇಶಗಳ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ವಿದೇಶಿ ಹಣಕಾಸಿನ ಒಳಹರಿವಿಗೆ ಕಾರಣವಾಗುತ್ತದೆ. ನಿನ್ನೆ ಅಮೆರಿಕದ 10 ವರ್ಷದ ಬಾಂಡ್ ದರ ಶೇ.4ಕ್ಕೆ ತಲುಪಿದ್ದು, ಈ ಸನ್ನಿವೇಶದಲ್ಲಿ ವಹಿವಾಟುಗಾರರು ವಿದೇಶಿ ಹಣಕಾಸು ತೊಡಗಿಸಲು ಬಯಸುವುದಿಲ್ಲ‘ ಎಂದು ಜಿಯೋಜಿತ್‌ ಫೈನಾಶ್ಶಿಯಲ್ ಸರ್ವಿಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.