ADVERTISEMENT

ಸೂಚ್ಯಂಕ 582 ಅಂಶ ಜಿಗಿತ

ತ್ರೈಮಾಸಿಕ ಫಲಿತಾಂಶ, ವಾಣಿಜ್ಯ ಸಮರ ತಗ್ಗುವ ನಿರೀಕ್ಷೆ

ಪಿಟಿಐ
Published 29 ಅಕ್ಟೋಬರ್ 2019, 19:52 IST
Last Updated 29 ಅಕ್ಟೋಬರ್ 2019, 19:52 IST
   

ಮುಂಬೈ : ದೀಪಾವಳಿ ಹಬ್ಬದ ನಂತರ ಮಂಗಳವಾರದ ವಹಿವಾಟಿನಲ್ಲಿ ಷೇರುಪೇಟೆಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

ದೇಶಿ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ಸಕರಾತಾತ್ಮಕ ಅಂಶಗ
ಳಿಂದಾಗಿ ಖರೀದಿ ವಹಿವಾಟು ಜೋರಾಗಿತ್ತು. ಇದರಿಂದ ಸೂಚ್ಯಂಕ
ಗಳು ನಾಲ್ಕು ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟುಗಳು ಅಂತ್ಯಗೊಂಡಿವೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ದಿನದ ವಹಿವಾಟಿ
ನಲ್ಲಿ 666 ಅಂಶಗಳವರೆಗೂ ಗರಿಷ್ಠ ಜಿಗಿತ ಕಂಡಿತ್ತು. ಆದರೆ ನಂತರ ಖರೀದಿ ವಹಿವಾಟು ತಗ್ಗಿದ್ದರಿಂದ 582 ಅಂಶ ಏರಿಕೆಯೊಂದಿಗೆ 39,831 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 160 ಅಂಶ ಹೆಚ್ಚಾಗಿ 11,787 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗಳಿಕೆ: ಟಾಟಾ ಸ್ಟೀಲ್‌, ಯೆಸ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಮಾರುತಿ ಸುಜುಕಿ, ಟೆಕ್‌ ಮಹೀಂದ್ರಾ ಮತ್ತು ಟಿಸಿಎಸ್‌ ಷೇರುಗಳು ಶೇ 7.09ರವರೆಗೂ ಗಳಿಕೆ ಕಂಡುಕೊಂಡಿವೆ.

ನಷ್ಟ: ಭಾರ್ತಿ ಏರ್‌ಟೆಲ್‌, ಕೋಟಕ್‌ ಬ್ಯಾಂಕ್‌, ಪವರ್‌ ಗ್ರಿಡ್‌ ಮತ್ತು ಎಸ್‌ಬಿಐ ಷೇರುಗಳು ಶೇ 3.41ರವರೆಗೂ ಇಳಿಕೆ ಕಂಡಿವೆ.

‘ಆರ್ಥಿಕತೆಗೆ ಉತ್ತೇಜನ ನೀಡಲು ಇನ್ನಷ್ಟು ಸುಧಾರಣಾ ಕ್ರಮಗಳು ಜಾರಿಯಾಗುವ ನಿರೀಕ್ಷೆ ಇದೆ. ಆದಾಯ ತೆರಿಗೆಯಲ್ಲಿ ಕಡಿತವಾಗುವ ಸಾಧ್ಯತೆಯೂ ಇದೆ. ಇದರಿಂದಾಗಿಷೇರುಪೇಟೆಗಳು ಗರಿಷ್ಠ ಮಟ್ಟದತ್ತ ಸಾಗುತ್ತಿವೆ. ಎರಡನೇ ತ್ರೈಮಾಸಿಕದಲ್ಲಿ ಪ್ರಮುಖ ಕಂಪನಿಗಳು ಹಣಕಾಸು ಸಾಧನೆಯೂ ಮಾರುಕಟ್ಟೆಯ ನಿರೀಕ್ಷಿತ ಮಟ್ಟಕ್ಕಿಂತಲೂ ಉತ್ತಮವಾಗಿದೆ’ ಎಂದು ಆಶಿಕಾ ಸ್ಟಾಕ್‌ ಬ್ರೋಕಿಂಗ್‌ ಕಂಪನಿಯ ಅಧ್ಯಕ್ಷ ಪಾರಸ್‌ ಬೋತ್ರಾ ಅವರು ವಹಿವಾಟಿನ ವಿಶ್ಲೇಷಣೆ ಮಾಡಿದ್ದಾರೆ.

ಎಫ್‌ಪಿಐ ಒಳಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ್ದಾರೆ. ದಿನದ ವಹಿವಾಟಿನಲ್ಲಿ
₹ 877 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ಸಕಾರಾತ್ಮಕ ಅಂಶಗಳು

-ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ
ಪ್ರಕಟವಾಗುತ್ತಿರುವ ಕಂಪನಿಗಳ ಆರ್ಥಿಕ ಸಾಧನೆ ಉತ್ತೇಜನಕಾರಿಯಾಗಿದೆ.

-ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸ

-ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತದ ನಿರೀಕ್ಷೆ

ಟಾಟಾ ಮೋಟರ್ಸ್‌: ಉತ್ತಮ ಗಳಿಕೆ

ನವದೆಹಲಿ (ಪಿಟಿಐ): ಟಾಟಾ ಮೋಟರ್ಸ್‌ ಕಂಪನಿಯ ಷೇರುಗಳು ಮಂಗಳವಾರ ಶೇ 17ರವರೆಗೂ ಏರಿಕೆ ಕಂಡುಕೊಂಡವು.

ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ₹ 7,103 ಕೋಟಿ ಏರಿಕೆ ಕಂಡಿದ್ದು ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 49,821.20 ಕೋಟಿಗಳಿಗೆ ತಲುಪಿದೆ.

ಎರಡನೇ ತ್ರೈಮಾಸಿಕದಲ್ಲಿ ಉತ್ತಮ ಆರ್ಥಿಕ ಸಾಧನೆ ಪ್ರಕಟಿಸಿರುವುದರಿಂದ ಷೇರುಗಳು ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಬಿಎಸ್‌ಇನಲ್ಲಿ 94.17 ಲಕ್ಷ ಷೇರುಗಳು ಹಾಗೂ ಎನ್‌ಎಸ್‌ಇನಲ್ಲಿ 18 ಕೋಟಿ ಷೇರುಗಳು ವಹಿವಾಟು ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.