ADVERTISEMENT

ಜಿಯೊ ಷೇರು ಶೇ 15ರಷ್ಟು ಏರಿಕೆ: ₹2 ಲಕ್ಷ ಕೋಟಿ ದಾಟಿದ ಕಂಪನಿಯ ಮಾರುಕಟ್ಟೆ ಮೌಲ್ಯ

ಪಿಟಿಐ
Published 23 ಫೆಬ್ರುವರಿ 2024, 15:34 IST
Last Updated 23 ಫೆಬ್ರುವರಿ 2024, 15:34 IST
<div class="paragraphs"><p>ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ</p></div>

ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ

   

ನವದೆಹಲಿ: ಷೇರುಪೇಟೆಯಲ್ಲಿ ಶುಕ್ರವಾರ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹಕ್ಕೆ ಸೇರಿರುವ ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಯ ಷೇರುಗಳ ಮೌಲ್ಯವು ಶೇ 15ರಷ್ಟು ಏರಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿಯಲ್ಲಿ ಜಿಯೊ ಫೈನಾನ್ಶಿಯಲ್‌ ಷೇರಿನ ಮೌಲ್ಯವು ಶೇ 10.62ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹355ಕ್ಕೆ ತಲುಪಿದೆ. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ನಲ್ಲಿ ಷೇರಿನ ಮೌಲ್ಯ ಶೇ 10.18ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹333.90ಕ್ಕೆ ಮುಟ್ಟಿದೆ. 

ADVERTISEMENT

ನಿಫ್ಟಿಯಲ್ಲಿ ಕಂಪನಿಯ ಒಟ್ಟು 27 ಕೋಟಿ ಈಕ್ವಿಟಿ ಷೇರುಗಳು ಮಾರಾಟವಾದರೆ, ಸೆನ್ಸೆಕ್ಸ್‌ನಲ್ಲಿ 2.43 ಕೋಟಿ ಷೇರುಗಳು ಮಾರಾಟವಾಗಿವೆ. ಕಂಪನಿಯ ಮಾರುಕಟ್ಟೆ ಮೌಲ್ಯವು ₹27,922 ಕೋಟಿಯಿಂದ ₹2.‌12 ಲಕ್ಷ ಕೋಟಿಗೆ ಏರಿಕೆಯಾಗಿದೆ.  

ಷೇರು ವಹಿವಾಟಿನ ಅಂತ್ಯದಲ್ಲಿ ರಿಲಯನ್ಸ್ ಇಂಡಸ್ಟೀಸ್‌ನ ಮಾರುಕಟ್ಟೆ ಮೌಲ್ಯವು ₹20.20 ಲಕ್ಷ ಕೋಟಿ ದಾಟಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ನಿಫ್ಟಿಯಲ್ಲಿ ಪ್ರತಿ ಷೇರಿನ ಬೆಲೆ ₹2,995.10 ಹಾಗೂ ಸೆನ್ಸೆಕ್ಸ್‌ನಲ್ಲಿ ₹2,996.15ಕ್ಕೆ ತಲುಪಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.