ADVERTISEMENT

ಷೇರುಪೇಟೆ | ಸಂವೇದಿ ಸೂಚ್ಯಂಕ 242 ಅಂಶ ಇಳಿಕೆ

ಪಿಟಿಐ
Published 7 ಮೇ 2020, 20:48 IST
Last Updated 7 ಮೇ 2020, 20:48 IST
   

ಮುಂಬೈ: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದೇಶಿ ಷೇರುಪೇಟೆಗಳಲ್ಲಿಗುರುವಾರ ಮತ್ತೆ ಮಾರಾಟ ಒತ್ತಡ ಕಂಡುಬಂದಿತು.

ಬ್ಯಾಂಕಿಂಗ್‌, ಹಣಕಾಸು ಮತ್ತು ಗೃಹೋಪಯೋಗಿ ಸಲಕರಣೆ ತಯಾರಿಕೆ ವಲಯದ ಷೇರುಗಳ ಬೆಲೆ ಕುಸಿತವು ಸೂಚ್ಯಂಕದ ಇಳಿಕೆಗೆ ಕಾರಣವಾಗಿದೆ. ಒಎನ್‌ಜಿಸಿ, ಭಾರ್ತಿ ಏರ್‌ಟೆಲ್‌, ಪವರ್‌ ಗ್ರಿಡ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಕೋಟಕ್‌ ಬ್ಯಾಂಕ್‌ ಷೇರುಗಳ ಬೆಲೆ ಕುಸಿತ ಕಂಡವು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 242 ಅಂಶ ಇಳಿಕೆ ಕಂಡು 31,443 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 72 ಅಂಶ ಇಳಿಕೆ ಕಂಡು 9,199 ಅಂಶಗಳಿಗೆ ತಲುಪಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.