ADVERTISEMENT

ಸೆನ್ಸೆಕ್ಸ್‌: ಮೂರನೇ ದಿನವೂ ಗಳಿಕೆ

ಪಿಟಿಐ
Published 8 ಮಾರ್ಚ್ 2023, 19:44 IST
Last Updated 8 ಮಾರ್ಚ್ 2023, 19:44 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಬ್ಯಾಂಕಿಂಗ್, ಹಣಕಾಸು ಮತ್ತು ತೈಲ ಕಂಪನಿಗಳ ಷೇರುಗಳನ್ನು ಹೂಡಿಕೆದಾರರು ಖರೀದಿ ಮಾಡಿದ್ದರಿಂದ ಸತತ ಮೂರನೇ ದಿನವೂ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 124 ಅಂಶ ಹೆಚ್ಚಾದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 43 ಅಂಶ ಏರಿಕೆ ಕಂಡಿತು.

ಸೆನ್ಸೆಕ್ಸ್‌ನಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಮೌಲ್ಯ ಶೇ 4.75ರಷ್ಟು ಹೆಚ್ಚಾಯಿತು. ವಲಯವಾರು, ಯುಟಿಲಿಟಿ ಶೇ 1.91, ವಿದ್ಯುತ್‌ ಶೇ 1.79, ಬಂಡವಾಳ ಸರಕುಗಳು ಶೇ 1.23 ಮತ್ತು ಆಟೊ ಶೇ 0.95ರಷ್ಟು ಗಳಿಕೆ ಕಂಡವು.

ADVERTISEMENT

ರಿಯಾಲ್ಟಿ, ಲೋಹ, ಗ್ರಾಹಕ ಬಳಕೆ, ಐ.ಟಿ. ಮತ್ತು ಆರೋಗ್ಯ ಸೇವೆಗಳ ವಲಯಗಳು ಇಳಿಕೆ ಕಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.