ADVERTISEMENT

ಬುಧ ಪ್ರದೋಷ ಆಚರಣೆ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 17 ಡಿಸೆಂಬರ್ 2025, 1:07 IST
Last Updated 17 ಡಿಸೆಂಬರ್ 2025, 1:07 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಇಂದು (ಡಿಸೆಂಬರ್ 17) ರಂದು ಬುಧ ಪ್ರದೋಷವನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು, ಬುಧಗ್ರಹ ಹಾಗೂ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಶುಭಫಲಗಳು ದೊರೆಯುತ್ತವೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ಈ ದಿನ ಸೂರ್ಯಾಸ್ತದ ಸಮಯದಲ್ಲಿ ಪೂಜೆ ಮಾಡಿದರೆ ನವಗ್ರಹಗಳ ಅನುಗ್ರಹ ನಿಮ್ಮದಾಗುತ್ತದೆ ಎಂಬ ನಂಬಿಕೆ ಇದೆ.

 ಭೌಮ (ಬುಧ) ಪ್ರದೋಷದ ಮಹತ್ವ:

ADVERTISEMENT

ಈ ಪ್ರದೋಷದ ದಿನದಂದು ಶಿವಲಿಂಗಕ್ಕೆ ಅಭಿಷೇಕ, ರುದ್ರಾಭಿಷೇಕ ಮತ್ತು ಅಲಂಕಾರ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಅಪೇಕ್ಷಿತ ಫಲಿತಾಂಶ ದೊರೆಯುತ್ತದೆ.  ವಿವಾಹದಲ್ಲಿ ಅಡೆತಡೆಗಳಿದ್ದರೆ, ಇದರ ಆಚರಣೆಯಿಂದ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.

ಪೂಜೆ ವಿಧಾನ:

ಭೌಮ ಪ್ರದೋಷದ ದಿನ ಉಪವಾಸವನ್ನು ಆಚರಿಸುವ ವ್ಯಕ್ತಿ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಬೇಕು. ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಉಪವಾಸದ ಪ್ರತಿಜ್ಞೆಯನ್ನು ತೆಗೆದುಕೊಂಡು ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಬೇಕು.

ಈ ದಿನ ಮನಸ್ಸಿನಲ್ಲಿ 'ಓಂ ನಮಃ ಬುಧ ದೇವಾ ಗ್ರಹ ನಮ್ಮ, ’ಓಂ ನಮಃ ಶಿವಾಯ' ಎನ್ನುವ ಮಂತ್ರವನ್ನು ಜಪಿಸಬೇಕು. ತ್ರಯೋದಶಿ ತಿಥಿಯ ಪ್ರದೋಷ ಕಾಲದಲ್ಲಿ ಅಂದರೆ, ಸೂರ್ಯಾಸ್ತದ ಮೂರು ಗಂಟೆಗಳ ಮೊದಲು ಬುಧನನ್ನು ಪೂಜಿಸಬೇಕು. ಸಂಜೆ 4:30 ರಿಂದ 7 ಗಂಟೆಯವರೆಗೆ ಬುಧ ಪ್ರದೋಷ ವ್ರತವನ್ನು ಆಚರಿಸುವುದು ಶುಭವೆಂದು ಪರಿಗಣಿಸಲಾಗಿದೆ.

ಹಸಿರು ಬಣ್ಣದ ಹೂಗಳು, ಪತ್ರೆ, ಅಕ್ಷತೆ, ದೀಪ, ಧೂಪದ್ರವ್ಯ, ಗಂಗಾಜಲ ಹಾಗೂ ಸಿಹಿತಿಂಡಿಗಳೊಂದಿಗೆ ಬುಧ ಮತ್ತು ಶಿವನನ್ನು ಪೂಜಿಸುವುದರಿಂದ ಒಳಿತು ಉಂಟಾಗುತ್ತದೆ.

ಸಂಜೆ ಮತ್ತೊಮ್ಮೆ ಸ್ನಾನ ಮಾಡಿ ಸ್ವಚ್ಛವಾದ ಬಿಳಿ ಬಟ್ಟೆಗಳನ್ನು ಧರಿಸಬೇಕು.

ಸಾಧ್ಯವಾದರೆ, ಉಪವಾಸವನ್ನು ಆಚರಿಸುವ ವ್ಯಕ್ತಿಯು ನವಗ್ರಹ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬಹುದು.

ಉಪವಾಸ ಮಾಡುವವರು ಇಡೀ ದಿನ ಆಹಾರವನ್ನು ಸೇವಿಸಬಾರದು. ಆರೋಗ್ಯದ ತೊಂದರೆ ಇರುವವರು ಹಣ್ಣುಗಳನ್ನು ಮಾತ್ರ ಸೇವಿಸಬಹುದು ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.