ADVERTISEMENT

Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 11:37 IST
Last Updated 24 ಡಿಸೆಂಬರ್ 2025, 11:37 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ಕ್ರಿಸ್‌ಮಸ್‌, ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿಯ ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಅಲಂಕಾರ ಹೇಗಿರಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

ಮನೆಯ ಬಾಗಿಲನ್ನು ಹೀಗೆ ಅಲಂಕರಿಸಿ:

ADVERTISEMENT

ಮನೆ ಚಂದವಾಗಿ ಕಾಣಲು ಪ್ರಮುಖವಾಗಿರುವುದೇ ಬಾಗಿಲು. ಮನೆಯ ಮುಂಬಾಗಿಲನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ. ಅಷ್ಟೇ ಅಲ್ಲದೇ ಹೂವುಗಳು, ಹೂವಿನ ಮಾಲೆ ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹೂವುಗಳಿಂದ ಅಲಂಕರಿಸಬಹುದು. ಇದರಿಂದ ಮನೆಯ ಸೊಬಗು ಹೆಚ್ಚುತ್ತದೆ ಹಾಗೂ ಮಕ್ಕಳಿಗೂ ಇದು ಖುಷಿ ಕೊಡುತ್ತದೆ.

ಗೊಡೆಯ ಮೇಲೆ ಕಲಾಕೃತಿ ಶೃಂಗಾರ:

ಮನೆಯ ಗೊಡೆಯ ಮೇಲೆ ಏಸುಕ್ರಿಸ್ತ, ಮರಿಯ ಕಲಾಕೃತಿಯನ್ನು ಹಾಕುವ ಮೂಲಕ ಮನೆಯ ಅಂದವನ್ನು ಹೆಚ್ಚಿಸಬಹುದು. ಅಲ್ಲದೇ ಗೊಡೆಯ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಬಹುದು.

ಹೂವಿನಿಂದ ಅಲಂಕಾರಿಸಿ:

ಹೂವುಗಳಿಲ್ಲದೇ ಯಾವುದೇ ಹಬ್ಬವು ನಡೆಯುದಿಲ್ಲ. ಅದರಲ್ಲೂ ಕ್ರಿಸ್‌ಮಸ್‌ಗೆ ಮನೆಯ ಅಂದವನ್ನು ಹೂವುಗಳು ಹೆಚ್ಚು ಮಾಡುತ್ತವೆ. ಕಿಟಕಿ, ಬಾಗಿಲು, ಮನೆಯ ಮೆಟ್ಟಿಲನ್ನು ಹೀಗೆ ಎಲ್ಲ ಸ್ಥಳಗಳನ್ನೂ ಹೂವುಗಳಿಂದ ಸಿಂಗರಿಸಬಹುದು.

ಮನೆಯಲ್ಲಿ ಕ್ರಿಸ್‌ಮಸ್‌ ಗಿಡ:

ಮನೆಯಲ್ಲಿ ‘ಕ್ರಿಸ್‌ಮಸ್‌ ಟ್ರೀ’ ಇಲ್ಲದೇ ಹೋದರೆ ಕ್ರಿಸ್‌ಮಸ್‌ ಹಬ್ಬ ಅಪೂರ್ಣ. ಹೀಗಾಗಿ ಕ್ರಿಸ್‌ಮಸ್‌ ಟ್ರೀಯನ್ನು ಸಿಂಗರಿಸಲು ನಕ್ಷತ್ರಗಳು, ಗಂಟೆಗಳು, ಉಡುಗೊರೆ ಬಾಕ್ಸ್‌ಗಳು ಗಾಜಿನ ಚೆಂಡುಗಳನ್ನು ಬಳಸುವುದು ಮನೆಯ ಸೊಬಗನ್ನು ಹೆಚ್ಚಿಸುತ್ತದೆ.

ದೀಪಗಳು, ಕ್ಯಾಂಡಲ್‌ಗಳ ಬಳಕೆ:

ವಿಶೇಷವಾಗಿ, ಕ್ರಿಸ್‌ಮಸ್‌ ಹಬ್ಬದಂದು ದೀಪಗಳು ಇರಲೇಬೇಕು. ಹೀಗಾಗಿ ಕ್ರಿಸ್‌ಮಸ್‌ಗೆ ದೀಪಗಳು ಹಾಗೂ ಕ್ಯಾಂಡಲ್‌ಗಳಿಂದ ಮನೆಯನ್ನು ಶೃಂಗರಿಸಿಕೊಳ್ಳಬಹುದು. ಅಲ್ಲದೇ ಕೋಣೆಗಳಲ್ಲಿ ವಿಧ ವಿಧವಾದ ವಿನ್ಯಾಸದ ದೀಪಗಳನ್ನು ಇರಿಸಿ, ಡೈನಿಂಗ್ ಟೇಬಲ್‌ ಅನ್ನು ಕ್ಯಾಂಡಲ್‌ಗಳಿಂದ ಅಲಂಕರಿಸಿ. ಇದು ಮನೆಯನ್ನು ಆಕರ್ಷವಾಗಿ ಕಾಣಲು ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.