
ಚಿತ್ರ: ಎಐ
ಇಂದಿನಿಂದ (ಡಿಸೆಂಬರ್ 16) ಧನುರ್ಮಾಸ ಆರಂಭವಾಗಲಿದೆ. ಈ ದಿನ ಸೂರ್ಯನು ಧನುರ್ ರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಇದನ್ನು ಧನು ಸಂಕ್ರಮಣ, ಧನುರ್ಮಾಸ ಎಂದು ಕರೆಯಲಾಗುತ್ತದೆ. ಈ ದಿನದ ಆಚರಣೆ ಹಿನ್ನೆಲೆ ಮಹತ್ವವೇನು ಎಂಬುದರ ಕುರಿತ ಮಾಹಿತಿ ತಿಳಿಯೋಣ.
ಮಾರ್ಗಶಿರ ಮಾಸ ಮುಗಿದ ತಕ್ಷಣ ಧನುರ್ಮಾಸ ಆರಂಭವಾಗುವಾಗುತ್ತದೆ. ಪಾವಿತ್ರತೆ, ದೇವಭಕ್ತಿ, ಜಪ ಹಾಗೂ ಪಾರಾಯಣ ಮಾಡುವುದಕ್ಕೆ ಅತ್ಯಂತ ಶುಭಕಾಲ ಎಂದು ಹೇಳಲಾಗುತ್ತದೆ.
ಪುರಾಣ ಕಥೆಗಳ ಪ್ರಕಾರ ಈ ಮಾಸದಲ್ಲಿ ಮಹಾಲಕ್ಷ್ಮಿ ಹಾಗೂ ವಿಷ್ಣುವಿನ ಅನುಗ್ರಹ ಭಕ್ತರ ಮೇಲೆ ಇರುತ್ತದೆ.
ಈ ಧನುರ್ಮಾಸದ ಎಂಟು ವಿಶೇಷತೆಗಳು:
ಬೆಳಗಿನ ಪ್ರಾತಃಕಾಲದಲ್ಲಿ ಮಾಡುವ ಪೂಜೆ ಅತ್ಯಂತ ಶ್ರೇಷ್ಠವಾಗಿದೆ.
ಬ್ರಹ್ಮ ಮುಹೂರ್ತ (ಬೆಳಿಗ್ಗೆ 4 ಗಂಟೆಯಿಂದ 6 ವರೆಗೆ)
ಈ ಸಮಯದಲ್ಲಿ ಮಾಡಿದ ದೇವಾರಾಧನೆ ಸಾವಿರ ಪಟ್ಟು ಹೆಚ್ಚಿನ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.
ಧನುರ್ಮಾಸದಲ್ಲಿ ಮಹಾಲಕ್ಷ್ಮಿ ಹಾಗೂ ನಾರಾಯಣನ ಪಾರಾಯಣ ಮಾಡುವುದು ಶುಭಕರ.
ಮಹಾಲಕ್ಷ್ಮಿಯ 30 ಮಂತ್ರಗಳನ್ನು ಪಠಣೆ ಮಾಡುವುದರಿಂದ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.
ಇಂದು ಸೂರ್ಯನು ಧನು ರಾಶಿಯಲ್ಲಿ ಇರುವುದರಿಂದ ಆಧ್ಯಾತ್ಮಿಕ ಶಕ್ತಿ ಭೂಮಿಯ ಮೇಲೆ ಪ್ರವಾಹದಂತೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ವೈಕುಂಠ ಪ್ರವೇಶ ಎಂದು ಹೇಳುತ್ತಾರೆ.
ದೈಹಿಕ ಹಾಗೂ ಮಾನಸಿಕ ಕಲ್ಮಶಗಳು ಹೊರಹೋಗುತ್ತವೆ. ಜಪ, ಪಾರಾಯಣ, ತಪಸ್ಸು ಹಾಗೂ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ದೇಹಕ್ಕೆ ಚೈತನ್ಯ ದೊರೆಯುತ್ತದೆ.
ದೇವಾಲಯಗಳಲ್ಲಿ ಪೂಜೆ ಮತ್ತು ವಿಶೇಷ ಸೇವೆ ಮಾಡುವುದು ಶುಭದಾಯಕವಾಗಿದೆ. ಧನುರ್ಮಾಸದಲ್ಲಿ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಅನ್ನದಾನ ಮಾಡುವುದು ಒಳ್ಳೆಯದು.
ಧನುರ್ಮಾಸದಲ್ಲಿ ಮಂಗಳ ಕಾರ್ಯಗಳು, ವಿವಾಹಗಳಂತಹ ಶುಭಕಾರ್ಯಗಳನ್ನು ಮಾಡುವುದಿಲ್ಲ.ಈ ತಿಂಗಳು ಸಂಪೂರ್ಣವಾಗಿ ಪಾರಾಯಣ, ಪೂಜೆ, ಜಪ ಹಾಗೂ ವ್ರತಗಳ ಸಮಯವಾಗಿದೆ. ಈ ಅವಧಿ ಜನವರಿ 16ರ ವರೆಗೆ ಇರುತ್ತದೆ. ನಂತರ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಧನುರ್ಮಾಸವನ್ನು ಲಕ್ಷ್ಮೀ ಕಟಾಕ್ಷದ ಮಾಸವೆಂದು ಕರೆಯುತ್ತಾರೆ. ಮನೆಯವರಿಗೆ ಸಂಪತ್ತು, ಕೀರ್ತಿ ಹಾಗೂ ಮೋಕ್ಷ ದೊರೆಯುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಧನುರ್ಮಾಸದ ಪೂಜೆಯ ಸಾರಾಂಶ
ಧನುರ್ಮಾಸ ಭಕ್ತಿ, ಪೂಜೆ, ಪ್ರಾರ್ಥನೆಗೆ ಮಹಾ ಪವಿತ್ರ ಕಾಲ ಎಂದು ಕರೆಯಲಾಗುತ್ತದೆ. ಸೂರ್ಯೋದಯಕ್ಕೆ ಮೊದಲು ಮಾಡುವ ಪೂಜೆಗೆ ಸಾವಿರ ಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮನೆಯಲ್ಲಿ ಮಂಗಳಕರ ಶಕ್ತಿ, ಮನಸ್ಸಿನಲ್ಲಿ ಶಾಂತಿ, ಜೀವನದಲ್ಲಿ ಸುಖ, ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.