ADVERTISEMENT

ಲೋಕ ಕಲ್ಯಾಣಕ್ಕಾಗಿ ವಿಷ ಕುಡಿದ ಶಿವನ ಆರಾಧನೆಯೇ ಗುರು ಪ್ರದೋಷ: ಆಚರಣೆ ಮಹತ್ವವೇನು?

ಎಲ್.ವಿವೇಕಾನಂದ ಆಚಾರ್ಯ
Published 1 ಜನವರಿ 2026, 6:26 IST
Last Updated 1 ಜನವರಿ 2026, 6:26 IST
   

ಗುರುಪ್ರದೋಷವನ್ನು ಜನವರಿ 1ರಂದು ಆಚರಿಸಲಾಗುತ್ತದೆ. ಪುರಾಣ ಕಥೆಗಳು ಹೇಳುವಂತೆ ಅಮೃತಕ್ಕಾಗಿ ಕ್ಷೀರ ಸಾಗರವನ್ನು ಕಡೆದಾಗ ವಿಷ ಹಾಗೂ ಅಮೃತ ದೊರೆಯಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಇಂದು ಸಂಜೆ 4:30 ರಿಂದ 6:30ರ ನಡುವಿನ ಸಮಯ ಪ್ರದೋಷ ಕಾಲವಾಗಿದೆ.

ಈ ದಿನ ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳಿತುಂಟಾಗುತ್ತದೆ ಎಂಬ ನಂಬಿಕೆ ಇದೆ. ಪ್ರದೋಷ ಸಮಯದಲ್ಲಿ ಪೂಜೆ ಮಾಡಿದರೆ ಸಕಲ ದೇವರುಗಳ ಅನುಗ್ರಹ ನಿಮ್ಮದಾಗಲಿದೆ. ಸೋಮವಾರ ಬರುವ ಪ್ರದೋಷವನ್ನು ಸೋಮ ಪ್ರದೋಷವೆಂದು ಗುರುವಾರ ಬರುವ ಪ್ರದೋಷವನ್ನು ಗುರುಪ್ರದೋಷವೆಂದು ಕರೆಯಲಾಗುತ್ತದೆ.

ಗುರುಪ್ರದೋಷದ ಮಹತ್ವ: 

ADVERTISEMENT

ಗುರು ಪ್ರದೋಷವನ್ನು ಆಚರಣೆ ಮಾಡುವುದರಿಂದ ಪದವಿಯಲ್ಲಿ ಉನ್ನತಿ, ಸಂಪತ್ತು ಲಭಿಸಲಿದೆ. ಜಾತಕದ ಪ್ರಕಾರ ಶನಿದೋಷ ಹಾಗೂ ಸಾಡೆ ಸಾತಿಯ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. 

ಇಂದು ಶಿವನಿಗೆ ಪೂಜೆ ಮಾಡುವುದರಿಂದ ಮದುವೆಗೆ ಇರುವ ಅಡೆತಡೆಗಳನ್ನು ಕಡಿಮೆಯಾಗಿ ಶುಭಯೋಗ ಕೂಡಿಬರಲಿದೆ. ಈ ದಿನ ರಾಘವೇಂದ್ರ ಸ್ವಾಮಿ ಹಾಗೂ ಲಕ್ಷ್ಮೀ ವಿಗ್ರಹಗಳಿಗೆ ಅಭಿಷೇಕ ಮಾಡಿ ಪೂಜಿಸಬೇಕು. ’ಓಂ ಶ್ರೀ ಗುರು ರಾಘವೇಂದ್ರಾಯನಮಃ’ ಎನ್ನುವ ಮಂತ್ರವನ್ನು ಜಪಿಸಬೇಕು.

ಪೂಜೆಯಲ್ಲಿ ಹಳದಿ ಬಣ್ಣದ ಹೂವು, ಅಕ್ಷತೆ, ದೀಪ, ಧೂಪದ್ರವ್ಯ ಹಾಗೂ ಸಿಹಿತಿಂಡಿಗಳನ್ನು ನೈವೇದ್ಯ ಮಾಡಬೇಕು. ಪೂಜಾ ಸಮಯದಲ್ಲಿ ಹಳದಿ ಬಟ್ಟೆ ಧರಿಸುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.