ಕಾರ್ತಿಕವನ್ನು ದೀಪಾರಾಧನೆಯ ಮಾಸ ಎಂತಲೂ ಕರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದು ಶುಭವೆಂದು ಜ್ಯೋತಿಷ ಹೇಳುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ದೀಪವನ್ನು ಹಚ್ಚುವಾಗ ಪಾಲಿಸಬೇಕಾದ ನಿಯಮಗಳು ಯಾವುವು? ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ವಿವರಿಸಿದ್ದಾರೆ.
ವೀಳ್ಯೆದೆಲೆಯ ಮೇಲೆ ಬಿಲ್ವಪತ್ರೆ ಇಟ್ಟು, ಬಿಲ್ವಪತ್ರೆಯ ಮೇಲೆ ದೀಪ ಹಚ್ಚುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ. ಇದರಿಂದ ಬಡತನ ನಿವಾರಣೆಯ ಜೊತೆಗೆ ಜಾತಕದಲ್ಲಿನ ದೋಷಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
ಬಿಲ್ವಪತ್ರೆ ಮರದ ಕೆಳಗೆ ದೀಪ ಹಚ್ಚುವುದರಿಂದ, ಶಿವನ ಅನುಗ್ರಹ ದೊರೆಯಲಿದೆ ಎಂದು ಹೇಳಲಾಗುತ್ತದೆ.
ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ದೀಪ ಹಚ್ಚುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ಮಾಂಸಾಹಾರವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.
ನುಗ್ಗೆಕಾಯಿ, ಸೋರೆಕಾಯಿ, ಬದನೆಕಾಯಿ, ಮೂಲಂಗಿ, ಅಣಬೆ ಹಾಗೂ ಕುಂಬಳಕಾಯಿ ಸೇವಿಸಬಾರದು.
ಕಾರ್ತಿಕ ಮಾಸವನ್ನು ಆಚರಣೆ ಮಾಡುವವರು ನಿಷ್ಠೆಯಿಂದ ನಡೆದುಕೊಳ್ಳದೆ ಇದ್ದರೆ, ರೋಗ ಪೀಡಿತರಾಗುವ, ಮಾನಸಿಕ ಚಿಂತೆಗೆ ಅನುಭವಿಸುವ, ಮನೆಯಲ್ಲಿ ಜಗಳ ಹಾಗೂ ದಾರಿದ್ರ್ಯ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷಿ ವಿವೇಕಾನಂದ ಆಚಾರ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.