ಎಐ ಚಿತ್ರ
ನವರಾತ್ರಿಯಲ್ಲಿ ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಒಂದೊಂದು ದಿನ ಒಂದೊಂದು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ವೇಳೆ ದೇವಿಗೆ ನೈವೇದ್ಯವನ್ನು ಸಲ್ಲಿಸುವು ಬಹಳ ಮುಖ್ಯ. ಪ್ರತಿ ದೇವಿಗೂ ಇಷ್ಟವಾದ ಆಹಾರ ಪಧಾರ್ಥಗಳನ್ನು ನೈವೇದ್ಯದ ರೂಪದಲ್ಲಿ ಇಡಲಾಗುತ್ತದೆ.
ನವರಾತ್ರಿಯ 9 ದೇವಿಯರಿಗೆ ಯಾವ ಯಾವ ನೈವೇದ್ಯಗಳನ್ನು ಇಟ್ಟು ಪೂಜೆ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಶೈಲಪುತ್ರಿ ದೇವಿ:
ದೇವಿಯ 1ನೇ ರೂಪ: ಶೈಲಪುತ್ರಿ.
ಬಣ್ಣ: ಹಳದಿ
ನೈವೇದ್ಯ: ಕೋಸಂಬರಿ, ಬೆಲ್ಲ ಅಥವಾ ಮೊಸರು ಅನ್ನವನ್ನು ನೈವೇದ್ಯಕ್ಕೆ ಇಡಬಹುದಾಗಿದೆ.
ಬ್ರಹ್ಮಚಾರಿಣಿ:
ದೇವಿಯ 2ನೇ ರೂಪ: ಬ್ರಹ್ಮಚಾರಿಣಿ.
ಬಣ್ಣ: ಹಸಿರು
ನೈವೇದ್ಯ: ಕೋಸಂಬರಿ, ಎಳ್ಳಿನಿಂದ ತಯಾರಿಸಿದ ಪದಾರ್ಥಗಳು ಅಥವಾ ಗೋಧಿ ಪಾಯಸ
ಚಂದ್ರಘಂಟಾ ದೇವಿ :
ದೇವಿಯ 3ನೇ ರೂಪ: ಚಂದ್ರಘಂಟಾ.
ಬಣ್ಣ: ಬೂದು.
ನೈವೇದ್ಯ: ಕೋಸಂಬರಿ, ಚಕ್ಕಲಿ, ಬೆಲ್ಲ ಅಥವಾ ಹಾಲಿನಿಂದ ತಯಾರಿಸಿದ ಪದಾರ್ಥಗಳನ್ನು ಇಟ್ಟು ಪೂಜೆಯನ್ನು ಸಲ್ಲಿಸಬಹುದು.
ಕೂಷ್ಮಾಂಡ ದೇವಿ :
ದೇವಿಯ 4ನೇ ರೂಪ: ಕೂಷ್ಮಾಂಡ ರೂಪವಾಗಿದೆ.
ಬಣ್ಣ: ನೀಲಿ
ನೈವೇದ್ಯ: ಕೋಸಂಬರಿ ಅಥವಾ ಎಳ್ಳಿನಿಂದ ತಯಾರಿಸಿದ ಪದಾರ್ಥಗಳು ಅಥವಾ ಗೋಧಿ ಪಾಯಸ
ಸ್ಕಂದ ಮಾತೆ:
ದೇವಿಯ 5ನೇ ರೂಪ: ಸ್ಕಂದ ಮಾತೆ.
ಬಣ್ಣ: ಬಿಳಿ
ನೈವೇದ್ಯ: ಕೋಸಂಬರಿ, ಬೆಲ್ಲ ಅಥವಾ ಮೊಸರು ಅನ್ನವನ್ನು ನೈವೇದ್ಯಕ್ಕೆ ಇಡಬಹುದು.
ಕಾತ್ಯಾಯಿನಿ:
ದೇವಿಯ 6ನೇ ರೂಪ: ಕಾತ್ಯಾಯಿನಿ.
ಬಣ್ಣ: ಕೆಂಪು
ನೈವೇದ್ಯ: ಕೋಸಂಬರಿ, ಚಿತ್ರಾನ್ನ ಅಥವಾ ಸಬ್ಬಕ್ಕಿ ಪಾಯಸವನ್ನು ಮಾಡಬಹುದು.
ಕಾಳ ರಾತ್ರಿ:
ದೇವಿಯ 7ನೇ ರೂಪ: ಕಾಳರಾತ್ರಿ.
ಬಣ್ಣ: ನವಿಲು ಹಸಿರು
ನೈವೇದ್ಯ: ಕೋಸಂಬರಿ, ಚಿತ್ರಾನ್ನ ಅಥವಾ ಮೊಸರಿನ ಅನ್ನ.
ಮಹಾ ಗೌರಿ:
ದೇವಿಯ 8ನೇ ರೂಪ: ಮಹಾ ಗೌರಿಯ ರೂಪವಾಗಿದೆ.
ಬಣ್ಣ: ಕೇಸರಿ
ನೈವೇದ್ಯ: ಕೋಸಂಬರಿ, ಎಳ್ಳಿನಿಂದ ತಯಾರಿಸಿದ ಪದಾರ್ಥಗಳು ಅಥವಾ ಗೋಧಿ ಪಾಯಸ.
ಸಿದ್ಧಿಧಾತ್ರಿ:
ದೇವಿಯ 9ನೇ ರೂಪ: ಸಿದ್ಧಿಧಾತ್ರಿಯ ರೂಪವಾಗಿದೆ.
ಬಣ್ಣ: ಗುಲಾಬಿ
ನೈವೇದ್ಯ: ಕೋಸಂಬರಿ, ಚಿತ್ರಾನ್ನ ಅಥವಾ ಸಬ್ಬಕ್ಕಿ ಪಾಯಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.