
ಸಂಕ್ರಾಂತಿ ಹಬ್ಬದಂದು ಮಹಿಳೆಯರಿಂದ ವಿಶೇಷ ಪೂಜೆ ಸಲ್ಲಿಕೆ
ಪ್ರಜಾವಾಣಿ ಚಿತ್ರ
ವರ್ಷದಲ್ಲಿ ಮೊದಲು ಬರುವ ಹಬ್ಬವೇ ಮಕರ ಸಂಕ್ರಾಂತಿ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ದೇಶದೆಲ್ಲೆಡೆ ಆಚರಿಸಲಾಗುವ ಈ ಮಕರ ಸಂಕ್ರಾಂತಿಯನ್ನು ರಾಜ್ಯದಾದಂತ್ಯ ಬಲು ಸಂಭ್ರಮ– ಸಡಗರದಿಂದ ಆಚರಣೆ ಮಾಡುತ್ತಾರೆ. ಅಂದು ಮನೆಯಲ್ಲೇ ವಿಶೇಷವಾದ ಖಾದ್ಯ, ಸಿಹಿ ತಿನಿಸುಗಳನ್ನು ತಯಾರಿಸಿ ಕುಟುಂಬಸ್ಥರಿಗೆ ಉಣಬಡಿಸುತ್ತಾರೆ. ಆದರೆ ಈ ಸಂಕ್ರಾಂತಿ ಹಬ್ಬದ ದಿನ ಮನೆಯಲ್ಲಿ ಮಾಡುವ ಅಡುಗೆಗೆ ಒಂದು ಹಿನ್ನಲೆ ಇದೆ. ಜೊತೆಗೆ ಸಂಕ್ರಾಂತಿ ಹಬ್ಬದ ದಿನ ತಯಾರಿಸುವ ಆಹಾರದಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರಯೋಜನ ದೊರಕುತ್ತದೆ.
ಎಳ್ಳುಂಡೆ
ಚಳಿಗಾಲದಲ್ಲಿ ಎಳ್ಳಿನ ಸೇವನೆಯಿಂದ ಆರೋಗ್ಯಕ್ಕೆ ಸಾಕಾಷ್ಟು ಲಾಭಗಳಿವೆ. ಎಣ್ಣೆ ಬೀಜಗಳ ಪೈಕಿ, ಭಾರತದಲ್ಲಿ ಮೊದಲ ಸ್ಥಾನ ಪಡೆದುಕೊಂಡ ಎಳ್ಳು ಅಪ್ಪಟ ಭಾರತೀಯ ಮೂಲದ್ದಾಗಿದೆ. ಎಳ್ಳು ಉತ್ತಮ ಗುಣಮಟ್ಟದ ಫ್ಯಾಟಿ ಆ್ಯಸಿಡ್ ಹಾಗೂ ಪ್ರೋಟೀನ್‌ಗಳ ಮೂಲವಾಗಿದೆ. ಚಳಿಗಾಲದಲ್ಲಿ ಎಳ್ಳು ಸೇವಿಸಿದರೆ, ಅದರಲ್ಲಿರುವ ಅಪರೂಪದ ಫ್ಯಾಟಿ ಆ್ಯಸಿಡ್ ದೇಹಕ್ಕೆ ನಿರಂತರ ಶಕ್ತಿಯನ್ನು ನೀಡಬಲ್ಲದು.
ಆಲಸ್ಯ ಮತ್ತು ಜಡತ್ವವನ್ನು ನಿವಾರಿಸುತ್ತದೆ. ಎಳ್ಳಿನಲ್ಲಿರುವ 'ಸೀಸಮಿನ್' ಮತ್ತು 'ಸೀಸಮೋಲಿನ್' ಎಂಬ ಸಂಯುಕ್ತಗಳು ಬಲಿಷ್ಠ ಉತ್ಕರ್ಷಣ ನಿರೋಧಕ (ಆ್ಯಂಟಿ ಆಕ್ಸಿಡೆಂಟ್) ಗುಣಗಳನ್ನು ಹೊಂದಿವೆ. ಬೆಲ್ಲದೊಂದಿಗೆ ಎಳ್ಳನ್ನು ಸೇವಿಸುವುದರಿಂದ, ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಿ, ರಕ್ತಕ್ಕೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.
ಎಳ್ಳುಂಡೆ ಖಾದ್ಯಗಳು
ಕ್ಯಾಲ್ಸಿಯಂ, ಮೆಗ್ನೀಷಿಯಮ್ ಹಾಗೂ ರಂಜಕವು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಜನವರಿಯಲ್ಲಿ ವಾತಾವರಣದಲ್ಲಿ ಶುಷ್ಕತೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವೇಳೆ ರೋಗನಿರೋಧಕ ಶಕ್ತಿ ಕ್ಷೀಣಿಸುವುದರಿಂದ ದೇಹಕ್ಕೆ ಹೆಚ್ಚಿನ ಖನಿಜಗಳ ಅಗತ್ಯವಿರುತ್ತದೆ. ಎಳ್ಳಿನಲ್ಲಿರುವ ಸತು, ಸೆಲೆನಿಯಮ್ ಮತ್ತು ಮೆಗ್ನೀಷಿಯಮ್ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿರುವ ಎಣ್ಣೆಯ ಅಂಶ ದೇಹಕ್ಕೆ ಮೃದುತ್ವವನ್ನು ನೀಡುತ್ತದೆ.
ರೊಟ್ಟಿ ಊಟ
ಸಂಕ್ರಾಂತಿ ಹಬ್ಬದಲ್ಲಿ ಮನೆಯಲ್ಲಿ ತಯಾಸಿದ ಅಡುಗೆ ದೇಹಕ್ಕೆ, ಹೊರಗಿನ ವಾತಾವರಣದ ವಿರುದ್ಧವಾಗಿ ಉಷ್ಣದ ಪ್ರಭಾವವನ್ನುಂಟು ಮಾಡಿ, ಬ್ಯಾಕ್ಟೀರಿಯ ಮತ್ತು ಸೋಂಕುಗಳನ್ನು ದೂರ ಮಾಡುತ್ತದೆ. ಅಲ್ಲದೆ ಅಡುಗೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಕಾಪಾಡುತ್ತದೆ. ಏಕೆಂದರೆ ಸಂಕ್ರಾಂತಿ ಹಬ್ಬದಂದು ಪೊಂಗಲ್, ಎಳ್ಳು ಬೆಲ್ಲ, ಕಬ್ಬು, ಶೇಂಗಾ ಹೊಳಿಗೆ ಇತ್ಯಾದಿ ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆ ಮಾಡುವ ಅಡುಗೆಯಲ್ಲಿ ಆರೋಗ್ಯದ ರಹಸ್ಯ ಇರುವುದು ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.