
ಶಬರಿಮಲೆಯಲ್ಲಿ ಮಕರಜ್ಯೋತಿ ವೀಕ್ಷಿಸುವುದು ಭಕ್ತರಿಗೆ ಅತ್ಯಂತ ವಿಶೇಷ. ಲಕ್ಷಾಂತರ ಭಕ್ತರು ಮಕರ ಜ್ಯೋತಿ ನೋಡಲು ಶಬರಿಮಲೆಗೆ ಆಗಮಿಸುತ್ತಾರೆ. ಮಕರ ಜ್ಯೋತಿ ನೋಡುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಮಕರಜ್ಯೋತಿಯ ಮಹತ್ವವೇನು ಎಂಬುದನ್ನು ತಿಳಿಯೋಣ.
ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಿಸುವ ಸಮಯವೇ ಮಕರ ಸಂಕ್ರಾಂತಿ. ಶಬರಿಮಲೆಯಲ್ಲಿ ಈ ದಿನ ಮಕರ ಜ್ಯೋತಿ ಕಾಣುತ್ತದೆ.
ಅಯ್ಯಪ್ಪನಿಗೆ 41 ದಿನಗಳ ಕಾಲ ವ್ರತಾಚರಣೆ ಮಾಡಿದ ನಂತರ ಮಕರ ಸಂಕ್ರಾಂತಿಯ ದಿನ ಪವಿತ್ರ ಮಕರಜ್ಯೋತಿಯ ದರ್ಶನವಾಗುತ್ತದೆ. ಲಕ್ಷಾಂತರ ಭಕ್ತರು ಮಕರಜ್ಯೋತಿಯ ದರ್ಶನಕ್ಕಾಗಿ ದೇಶದ ನಾನಾ ಮೂಲೆಗಳಿಂದ ಬರುತ್ತಾರೆ.
ಶಬರಿಮಲೆಯ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಮ್ ಮೇಲು ಬೆಟ್ಟದ ಮೇಲಿರುವ ಕಾಡಿನಲ್ಲಿ ಪ್ರತಿ ವರ್ಷ ಜನವರಿ 14ರಂದು ಮಕರಜ್ಯೋತಿ ಗೋಚರಿಸುತ್ತದೆ. ಸಂಜೆ 7 ಗಂಟೆಗೆ ಅಯ್ಯಪ್ಪಸ್ವಾಮಿಗೆ ಆರತಿ ಮಾಡಿದ ನಂತರ ಜ್ಯೋತಿಯ ದರ್ಶನವಾಗುತ್ತದೆ.
ಮಕರಜ್ಯೋತಿ ಮೂರು ಬಾರಿ ಮಿನುಗಿ ಅದೃಶ್ಯವಾಗುತ್ತದೆ. ಮಕರ ಜ್ಯೋತಿಯನ್ನು ಪೊನ್ನಮ್ ಮೇಲು ಬೆಟ್ಟದ ಅರಣ್ಯ ಮಧ್ಯೆ ಇರುವ ಸಣ್ಣಂ ಎಂಬ ದೇವಸ್ಥಾನದಲ್ಲಿ ಅಲ್ಲಿನ ಗಿರಿ ಜನರು ವರ್ಷಕ್ಕೊಮ್ಮೆ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ, ಕರ್ಪೂರ ಹತ್ತಿಸುತ್ತಾರೆ ಎಂದು ಹೇಳಲಾಗುತ್ತದೆ. ಇದು ಜ್ಯೋತಿಯ ರೂಪದಲ್ಲಿ ಗೋಚರಿಸುತ್ತದೆ ಎಂಬ ನಂಬಿಕೆ ಇದೆ.
ಮಕರ ಜ್ಯೋತಿ ದೈವದತ್ತವಾದ್ದು. ಇದು ದೇವರ ಸೃಷ್ಟಿ ಎಂಬ ನಂಬಿಕೆಯೂ ಇದೆ. ಒಟ್ಟಾರೆ ಈ ಜ್ಯೋತಿಯ ದರ್ಶನ ಪಡೆಯುವುದು ಶುಭಕರ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.