ADVERTISEMENT

ತುಳಸಿಯಲ್ಲಿ 4 ವಿಧಗಳು: ಯಾವುದರ ಪೂಜೆ ಹೆಚ್ಚು ಶ್ರೇಷ್ಠ

ಎಲ್.ವಿವೇಕಾನಂದ ಆಚಾರ್ಯ
Published 16 ಡಿಸೆಂಬರ್ 2025, 7:54 IST
Last Updated 16 ಡಿಸೆಂಬರ್ 2025, 7:54 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಹಿಂದೂ ಧರ್ಮದಲ್ಲಿ ತುಳಸಿಗಿಡಕ್ಕೆ ಪೂಜನೀಯ ಸ್ಥಾನವಿದೆ. ಮನೆಯಲ್ಲಿ ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂಬ ನಂಬಿಕೆ ಇದೆ. 

ತುಳಸಿಯ 4 ವಿಧಗಳು

ADVERTISEMENT

ಶ್ಯಾಮ ತುಳಸಿ: ​ಈ ತುಳಸಿ ಶ್ರೀಕೃಷ್ಣನಿಗೆ ಪ್ರಿಯವಾದ ತುಳಸಿಯಾಗಿದೆ. ಆದ್ದರಿಂದಲೇ ಈ ತುಳಸಿಗೆ ಶ್ಯಾಮ ತುಳಸಿಯೆಂಬ ಹೆಸರು ಬಂದಿದೆ. ಶ್ಯಾಮ ತುಳಸಿಯ ಎಲೆಗಳು ಆಳವಾದ ನೇರಳೆ ಬಣ್ಣದಿಂದ ಕೂಡಿರುತ್ತವೆ. ಇದನ್ನು ಕೃಷ್ಣ ತುಳಸಿ ಎಂತಲೂ ಕರೆಯತಲಾಗುತ್ತದೆ. ಮಾತ್ರವಲ್ಲ, ಹೆಚ್ಚಾಗಿ ಇದನ್ನೇ ಪೂಜಿಸುವುದನ್ನು ಕಾಣಬಹುದು.

ರಾಮ ತುಳಸಿ​: ಶ್ರೀ ರಾಮನಿಗೆ ಸಮರ್ಪಿತವಾದ ತುಳಸಿಯೇ ರಾಮ ತುಳಸಿ. ಮನೆಯಲ್ಲಿ ರಾಮತುಳಸಿ ಇದ್ದರೆ ಸುಖ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ದುಷ್ಟ ಶಕ್ತಿ ಹಾಗೂ ನಕಾರಾತ್ಮಕತೆಯಿಂದ ಮನೆಯವರನ್ನು ರಕ್ಷಿಸುತ್ತವೆ ಎಂಬ ನಂಬಿಕೆ ಇದೆ. 

ವನ ತುಳಸಿ ಅಥವಾ ನಿಂಬೆ ತುಳಸಿ​: ವನ ತುಳಸಿಯನ್ನು ಅರಣ್ಯ ತುಳಸಿ ಎಂತಲೂ ಕರೆಯುತ್ತಾರೆ. ಇದು ಬೇರೆಲ್ಲಾ ತುಳಸಿಗಿಡಕ್ಕಿಂತ ಎತ್ತರವಾಗಿ ಮತ್ತು ದೈತ್ಯವಾಗಿ ಬೆಳೆಯುತ್ತದೆ. ಆದ್ದರಿಂದಲೇ ಇದಕ್ಕೆ ವನ ತುಳಸಿ, ಅರಣ್ಯ ತುಳಸಿ ಎಂಬ ಹೆಸರು ಬಂದಿದೆ. ವಿಷ್ಟುವಿನ ಪೂಜೆಯಲ್ಲಿ ಈ ತುಳಸಿ ಬಳಸುವುದು ಸೂಕ್ತವಾಗಿದೆ.  

ಶ್ವೇತ ತುಳಸಿ: ಶ್ವೇತ ತುಳಸಿಯನ್ನು ವಿಷ್ಣು ತುಳಸಿ ಎಂದೂ ಕರೆಯುತ್ತಾರೆ. ಈ ತುಳಸಿಯಲ್ಲಿ ಬಿಳಿ ಬಣ್ಣದ ಹೂವುಗಳನ್ನು ಕೂಡ ನೋಡಬಹುದು. ಇದು ಬಯಲು ಪ್ರದೇಶ ಹಾಗೂ ಕಾಡುಗಳಲ್ಲಿ ಕಂಡುಬರುತ್ತದೆ. ಅಷ್ಟಾಗಿ ಪೂಜಿಸುವುದಿಲ್ಲ.

ತುಳಸಿಯ ಲಾಭಗಳು 

  • ಮನೆಯನ್ನು ದುಷ್ಟಶಕ್ತಿಯಿಂದ ರಕ್ಷಿಸುತ್ತದೆ. 

  • ಮನೆಗೆ ಶುಭಫಲ ತಂದುಕೊಡುತ್ತದೆ.

  • ವಾಸ್ತುದೋಷಗಳು ಪರಿಹಾರವಾಗುತ್ತದೆ. 

  • ಲಕ್ಷ್ಮೀಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.