
ಬಾದಾಮಿ: ‘ಚಾಲುಕ್ಯರ ಇತಿಹಾಸ, ಪರಂಪರೆ, ಶಿಲ್ಪಕಲೆ ಮತ್ತು ಶಾಸನಗಳ ಸಂಶೋಧನೆಯನ್ನು ಇತಿಹಾಸ ತಜ್ಞರು ಮಾಡಿದ್ದಾರೆ. ಚಾಲುಕ್ಯರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಲುಕ್ಯ ಉತ್ಸವ-2026ರ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಬಸವ ಮಂಟಪದಲ್ಲಿ ಶನಿವಾರ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಗೆ ಅವರು ಚಾಲನೆ ನೀಡಿದರು.
‘ಚಾಲುಕ್ಯರ ಇತಿಹಾಸ ಗೋಷ್ಠಿಯ ಬಗ್ಗೆ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಚಾಲುಕ್ಯರ ಸ್ಮಾರಕಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ ಇತಿಹಾಸದ ಅಧ್ಯಯನ ಮಾಡಬೇಕು ಮಾಡಬೇಕು’ ಎಂದರು.
ಲೇಖಕಿ ನಾಗರತ್ನ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿ ನಟರಾಜ ಮೂರ್ತಿ ಬಗ್ಗೆ ತಿಳಿಸಿದರು. ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಚಾಲುಕ್ಯರ ಕುರಿತು ಆಶಯ ನುಡಿ ಹೇಳಿದರು.
ಎರಡನೇ ಗೋಷ್ಠಿ: ‘ಚಾಲುಕ್ಯರ ಸ್ಮಾರಕಗಳಲ್ಲಿ ಶೈವ, ವೈಷ್ಣವ, ಜೈನ ಮತ್ತು ಬೌದ್ಧ ಧರ್ಮಗಳ ಮೂರ್ತಿ ಶಿಲ್ಪಗಳನ್ನು ಕಾಣಬಹುದು. ಚಾಲುಕ್ಯರು ಸರ್ವಧರ್ಮಗಳನ್ನು ಸಮನ್ವಯತೆಯಿಂದ ಕಂಡಿರುವುದು ಇಲ್ಲಿನ ಶಿಲ್ಪಗಳು ಸಾಕ್ಷಿಯಾಗಿವೆ ’ ಎಂದು ಕನ್ನಡ ಹಂಪಿ ವಿವಿ ಅಧ್ಯಯನಾಂಗ ನಿರ್ದೇಶಕ ಅಮರೇಶ ಯತಗಲ್ ‘ ಬಾದಾಮಿ ಚಾಲುಕ್ಯರ ಧರ್ಮಸಮನ್ವಯತೆ ’ ಬಗ್ಗೆ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರಕಾಶ ನರಗುಂದ ‘ ಬಾದಾಮಿ ಚಾಲುಕ್ಯರು ಸರ್ವಧರ್ಮಗಳಲ್ಲಿ ಸಮನ್ವಯತೆ ಮತ್ತು ಭಾವೈಕ್ಯತೆಯಿಂದ ಬದುಕಿದ್ದರು ’ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಸಿ. ಮನ್ನಿಕೇರಿ, ಡಿವೈಪಿಸಿ ಪ್ರಮೋದಿನಿ ಬಳವಲಮಟ್ಟಿ, ಬಿಇಒ ಕೇಶವ ಪೆಟ್ಲೂರ ವೇದಿಕೆಯಲ್ಲಿದ್ದರು. ಆರ್.ಬಿ. ಸಂಕದಾಳ ಸ್ವಾಗತಿಸಿದರು. ಬಸಮ್ಮ ನರಸಾಪೂರ ವಂದಿಸಿದರು.
ಇತಿಹಾಸ ಆಸಕ್ತರು, ಪದವಿ ಕಾಲೇಜು, ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರೌಢಶಾಲೆಗಳ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಚಾಲುಕ್ಯರು ಪರಧರ್ಮ ಸಹಿಷ್ಣುಗಳು ಆಕರ್ಷಕ ನಟರಾಜ ಮೂರ್ತಿ ಮೂರ್ತಿ ಶಿಲ್ಪಗಳ ಅಧ್ಯಯನ ಮಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.