ADVERTISEMENT

ಮಳೆಗೆ ಜಗ್ಗದೇ ಕಾನ್‌ಸ್ಟೆಬಲ್ ಕಾರ್ಯನಿರ್ವಹಣೆ: ಪ್ರಶಂಸಾ ಪತ್ರ ಬರೆದ ಡಿಸಿಎಂ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 10:22 IST
Last Updated 9 ಜುಲೈ 2020, 10:22 IST
   
""

ಬಾಗಲಕೋಟೆ: ತಾಲ್ಲೂಕಿನ ಕಲಾದಗಿಯ ಸೀಲ್‌‌ಡೌನ್ ಪ್ರದೇಶದಲ್ಲಿ ಬುಧವಾರ ಸುರಿಯುವ ಮಳೆಯ ನಡುವೆ ಛತ್ರಿಯ ಕೆಳಗೆ ನಿಂತು ಕರ್ತವ್ಯ ನಿರ್ವಹಿಸಿದ ಕಾನ್‌ಸ್ಟೆಬಲ್ ಮಾರುತಿ ಭಜಂತ್ರಿ ಅವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶಂಸಾ ಪತ್ರ ಬರೆದಿದ್ದಾರೆ.

ಮಳೆಯ ನಡುವೆ ಮಾರುತಿ ಭಜಂತ್ರಿ ಕಾರ್ಯನಿರ್ವಹಿಸುತ್ತಿರುವ ವಿಡಿಯೊವನ್ನು ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾರುತಿ ಅವರನ್ನು ಗುರುವಾರ ತಮ್ಮ ಕಚೇರಿಗೆ ಕರೆಸಿ ಗೌರವಿಸಿದ್ದಾರೆ. ಜೊತೆಗೆ ಅವರೂ ಪ್ರಶಂಸಾ ಪತ್ರ ನೀಡಿದ್ದಾರೆ.

ಹಾವೇರಿಯಲ್ಲಿ ಕೆಲಸ ಮಾಡುವ ಕಲಾದಗಿಯ ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್‌ವೊಬ್ಬರ ಮದುವೆ ಸಮಾರಂಭ ಜೂನ್ 12ರಂದು ಬಾಗಲಕೋಟೆಯಲ್ಲಿ ನಡೆದಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಜನರಿಗೆ ಕೋವಿಡ್-19 ದೃಢಪಟ್ಟಿದೆ. ಹೀಗಾಗಿ ಗ್ರಾಮದಲ್ಲಿ ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ADVERTISEMENT

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಮಾರುತಿ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪ್ರಶಂಸಾ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.