
ತೋಟ
ಬಾಗಲಕೋಟೆ: ಭಾನುವಾರದಿಂದ ಆರಂಭವಾಗಲಿರುವ 14 ನೇ ತೋಟಗಾರಿಕಾ ಮೇಳದ ಮೂರು ದಿನಗಳಂದು ಈ ಸಾಲಿಗೆ ಆಯ್ಕೆಯಾದ ಶ್ರೇಷ್ಠ ತೋಟಗಾರಿಕಾ ರೈತರಿಗೆ ಪ್ರಶಸ್ತಿ ನೀಡಲಾಗುವುದು.
ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿಗೆ ಆಯ್ಕೆಯಾದವರು ಇಂತಿದ್ದಾರೆ.
ವಿ.ಮಂಜುನಾಥ (ಕೋಲಾರ ಜಿಲ್ಲೆ), ಬಿ.ನಂಜುಂಡಗೌಡ (ಚಿಕ್ಕಬಳ್ಳಾಪುರ), ನಾಗಪ್ಪ ಕುಪ್ಪುಗೌಡ (ಉತ್ತರ ಕನ್ನಡ), ಮಹಾದೇವ ಮೆಳ್ಳಿಗೇರಿ (ಬಾಗಲಕೋಟೆ), ಸತ್ಯಶೀಲ ನಿಡೋದ (ಬೀದರ), ಶರ್ವಕುಮಾರ ಆವಂತಿ (ಕಲಬುರ್ಗಿ), ವಿಶ್ವಶಂಕರ ಸಂತೋಷಕುಮಾರ (ಯಾದಗಿರಿ), ಬಸವರಾಜ ಪರಗೊಂಡಪ್ಪ ಸಿದ್ದಾಪುರ (ವಿಜಯಪುರ).
ಜಗದೀಶ ಪಿ. (ಮೈಸೂರು ಜಿಲ್ಲೆ), ಸಿದ್ದೇಗೌಡ ಎನ್. (ಚಾಮರಾಜನಗರ), ಎಚ್.ಎನ್.ಸತ್ಯನಾರಾಯಣ್ (ಮಂಡ್ಯ), ಲಕ್ಷ್ಮೀ ಟಿ.ಎಂ. (ಹಾಸನ), ಕಲಾವತಿ ಮಾರುತಿ ಚವನಗೌಡರ (ಧಾರವಾಡ), ಭೀಮರಾವ್ ತಾನಾಜಿರಾವ್ ಶಿಂಧೆ (ಗದಗ), ನಾಗರಾಜ ಶಿವಾನಂದ ಹುಲಗೂರ (ಹಾವೇರಿ), ಬಾಳಪ್ಪ ಬಸಪ್ಪ ಬೆಳಕೂಡ (ಬೆಳಗಾವಿ).
ರಮೇಶ ಎಚ್. (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಮುನಿರಾಜು ಬಿ.ಎನ್. (ಬೆಂಗಳೂರು ನಗರ), ದೇವರಾಜು ಜಿ. (ರಾಮನಗರ), ಚನ್ನಕೇಶವಸ್ವಾಮಿ (ತುಮಕೂರು), ಸುದೇಶಕುಮಾರ ವೀರಬಸಪ್ಪ ಪಟ್ಟಣಶೆಟ್ಟಿ (ಕೊಪ್ಪಳ), ಪದ್ಮಾವತಿ ಶರಣಬಸವ ಬಾಗೋಡಿ (ರಾಯಚೂರ), ಕೆ.ಬಸಪ್ಪ ಚನ್ನಬಸಪ್ಪ (ಬಳ್ಳಾರಿ), ಶ್ರೀ ಮಹೇಶ್ವರ ಸ್ವಾಮಿಗಳು (ವಿಜಯನಗರ).
ಪ್ರಶಸ್ತಿಗೆ ಆಯ್ಕೆಯಾಗಿರುವ ರೈತರನ್ನು ಡಿ. 21ರಂದು 8 ಜನ, ಡಿ. 22ರಂದು 8 ಹಾಗೂ ಡಿ. 23 8 ರೈತರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.