ADVERTISEMENT

ಬಾದಾಮಿ: ರಾಜ್ಯ ಹೆದ್ದಾರಿ ಆವರಿಸಿದ ಮಣ್ಣು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:48 IST
Last Updated 17 ನವೆಂಬರ್ 2025, 4:48 IST
ಬಾದಾಮಿ ಪಟ್ಟಣದಲ್ಲಿ ರೈಲ್ವೆ ಸ್ಟೇಶನ್ ರಾಜ್ಯ ಹೆದ್ದಾರಿಯ ಡಾಂಬರ್ ರಸ್ತೆಯಲ್ಲಿ ಮಣ್ಣು ಆವರಿಸಿದೆ.
ಬಾದಾಮಿ ಪಟ್ಟಣದಲ್ಲಿ ರೈಲ್ವೆ ಸ್ಟೇಶನ್ ರಾಜ್ಯ ಹೆದ್ದಾರಿಯ ಡಾಂಬರ್ ರಸ್ತೆಯಲ್ಲಿ ಮಣ್ಣು ಆವರಿಸಿದೆ.   

ಬಾದಾಮಿ: ಪಟ್ಟಣದ ರಾಜ್ಯ ಹೆದ್ದಾರಿ-14 ರಸ್ತೆಯಲ್ಲಿ ಅರ್ಧಕ್ಕೂ ಅಧಿಕ ಮಣ್ಣು ಆವರಿಸಿದ್ದರಿಂದ ಧೂಳುಮಯವಾಗಿದೆ. ವಾಹನಗಳು ಸಂಚರಿಸುವಾಗ ಪಾದಚಾರಿಗಳ ಮೈಮೇಲೆ ಧೂಳೇ ಧೂಳು ಎನ್ನುವಂತಾಗಿದೆ.

ಪಟ್ಟಣದ ಗದಗ ರಸ್ತೆಯ ಅಂಬೇಡ್ಕರ್ ವೃತ್ತ, ವೀರಪುಲಿಕೇಶಿ ವೃತ್ತ, ಕುಳಗೇರಿ ರಸ್ತೆಯ ನೀರಾವರಿ ಇಲಾಖೆ, ರೈಲ್ವೆ ಸ್ಟೇಶನ್ ರಸ್ತೆಯ ಸರ್ಕಾರಿ ಪ್ರೌಢ ಶಾಲೆಯ ವರೆಗಿನ ರಸ್ತೆಯಲ್ಲಿ ಕೆಂಪು ಮಣ್ಣು ಆವರಿಸಿದೆ.

ಐತಿಹಾಸಿಕ ಪ್ರವಾಸಿ ತಾಣವಾಗಿರುವುದರಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುವರು. ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪ್ರವಾಸಿ ತಾಣವನ್ನು ಸ್ವಚ್ಛವಾಗಿಡಬೇಕು ಎಂದು ತಿಳಿಸಿದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆಂದು ಸಾರ್ವಜನಿಕರ ಆರೋಪವಾಗಿದೆ.

ADVERTISEMENT

‘ಸ್ಥಳೀಯರು ಮತ್ತು ಪ್ರವಾಸಿಗರಿಗೆ ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗಿದೆ. ಧೂಳಿನಿಂದ ಕೆಲವರಿಗೆ ಅಲರ್ಜಿಯಾಗಿ ಆಸ್ಪತ್ರೆಗೆ ಹೋಗುವಂತಾಗಿದೆ. ಪುರಸಭೆಯು ಮಣ್ಣನ್ನು ಸ್ವಚ್ಛತೆ ಕೈಗೊಂಡು ಪರಿಸರವನ್ನು ಸುಂದರ ಗೊಳಿಸಬೇಕು ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಪುರಸಭೆಗೆ ಒತ್ತಾಯಿಸಿದ್ದಾರೆ.

ರಸ್ತೆಯಲ್ಲಿ ಆವರಿಸಿದ ಮಣ್ಣನ್ನು ಸ್ವಚ್ಛತೆ ಕೈಕೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.