
ಗುಳೇದಗುಡ್ಡ: ಪಟ್ಟಣದ ಕೈಮಗ್ಗದಲ್ಲಿ ಉತ್ಪಾದಿಸುವ ಕಾಟನ್ ಸೀರೆ, ಗುಳೇದಗುಡ್ಡ ಖಣವನ್ನು ಉಪಯೋಗಿಸಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಬೇಕೆಂದು ನಟಿ ಪೂಜಾಗಾಂಧಿ ಹೇಳಿದರು.
ಅವರು ಪಟ್ಟಣದ ಕಮತಗಿ ರಸ್ತೆಗೆ ಇರುವ ಕೋಟೆಕಲ್ ಪಿಕೆಪಿಎಸ್‍ದ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪದನಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಅಲ್ಲಿನ ಕೈಮಗ್ಗ ಹಾಗೂ, ಸೀರೆ ನೇಯುವುದನ್ನು ವೀಕ್ಷಿಸಿ ಮಾತನಾಡಿದರು.
ಸ್ವದೇಶಿ ವಸ್ತುಗಳನ್ನು ಬಳಸಬೇಕೆಂದು ದೊಡ್ಡವರು ಹೇಳುತ್ತಾರೆ, ಆದರೆ ಯಾರೂ ಬಳಸಲು ಮುಂದೆ ಬರುವುದಿಲ್ಲ. ನಾವೆಲ್ಲ ಕೈಮಗ್ಗದಲ್ಲಿ ತಯಾರಾದ ವಸ್ತುಗಳನ್ನು ಬಳಸಿ ಆ ಉದ್ದಿಮೆಯನ್ನು ಪ್ರೋತ್ಸಾಹಿಸಬೇಕು ಎಂದರು.
ಸ್ವದೇಶಿ ವಸ್ತುಗಳನ್ನು ಬಳಸಬೇಕು. ಇಲ್ಲಿನ ಹನಮಂತ ಮಾವಿನಮರದ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡು ಕೈಮಗ್ಗ ನೇಕಾರರ ಉತ್ಪಾದನಾ ಕೇಂದ್ರವನ್ನು ಆರಂಭಿಸಿ, ಅದರ ಮುಖಾಂತರ ಅನೇಕ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಇಲ್ಲಿ ತುಂಬಾ ಜನ ಕಷ್ಟಪಟ್ಟು ಸೀರೆಗಳನ್ನು ತಯಾರಿಸುತ್ತಾರೆ. ಇಲ್ಲಿನ ಸೀರೆಗಳು ತುಂಬಾ ಸುಂದರ ಹಾಗೂ ಬೇಡಿಕೆವುಳ್ಳವುಗಳಾಗಿವೆ. ಈ ಸೀರೆಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಸಿಗಬೇಕು. ಸರ್ಕಾರವೂ ಪ್ರೋತ್ಸಾಹಿಸಬೇಕು. ಇಲ್ಲಿನ ಉತ್ಪನ್ನಗಳಾದ ಸೀರೆಗಳನ್ನು ಕರ್ನಾಟಕದ ಪ್ರತಿಯೊಬ್ಬ ಮಹಿಳೆಯ ಖರೀದಿಸಿ, ಬಳಸಿ ಪ್ರೋತ್ಸಾಹಿಸಬೇಕೆಂದರು.
ಪಿಕೆಪಿಎಸ್ ಮುಖ್ಯ ವ್ಯವಸ್ಥಾಪಕ ಚಂದ್ರಮೋಹನ ಕಲ್ಯಾಣಿ, ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ನಿರ್ದೇಶಕರಾದ ಸಂಗಪ್ಪ ಹಡಪದ, ಸಂತೋಷ ತಿಪ್ಪಾ, ಸಂತೋಷ ನಾಯನೇಗಲಿ, ಸಚೀನ ರಾಂಪೂರ ಸೇರಿದಂತೆ ಕೇಂದ್ರದ ಕಾರ್ಮಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.