ಕೂಡಲಸಂಗಮ: ಕಳೆದ ಒಂದು ವಾರದಿಂದ ನಿತ್ಯ ನದಿಯ ದಡದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ, ಮಲಪ್ರಭಾ ನದಿಗಳು ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ತುಂಬಿ ಹರಿಯುತ್ತಿವೆ.
ನಾರಾಯಣಪೂರ ಜಲಾಶಯ ಹಿನ್ನಿರು ಅಧಿಕಗೊಂಡಿದ್ದು, ನದಿಯ ದಡದ ಜಮೀನುಗಳಿಗೆ ನೀರು ನುಗ್ಗಿದೆ. ಕೂಡಲಸಂಗಮದ ಐತಿಹಾಸಿಕ ಸಂಗಮೇಶ್ವರ ದೇವಾಲಯಕ್ಕೆ ನೀರು ನುಗ್ಗಲು 5 ಮೆಟ್ಟಿಲುಗಳು ಬಾಕಿ ಉಳಿದಿವೆ. ತುಂಬಿ ಹರಿಯುತ್ತಿರುವ ಕೃಷ್ಣಾ, ಮಲಪ್ರಭಾ ನದಿಯನ್ನು ನೋಡಲು ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ತಂಡೋಪ ತಂಡವಾಗಿ ಸುಕ್ಷೇತ್ರಕ್ಕೆ ಆಗಮಿಸುತ್ತಿರುವ ದೃಶ್ಯ ಬುಧವಾರ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.