ಗುಳೇದಗುಡ್ಡ: ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮಹಿಳೆಯರಿಂದ ಸಂಘಟನೆ ಕೆಲಸ ನಿರಂತರವಾಗಿ ನಡೆಯಬೇಕು. ಪ್ರತಿಯೊಬ್ಬ ಮಹಿಳೆಯರು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಅವರಲ್ಲಿ ಸೃಜನಶೀಲ, ಸಾಮಾಜಿಕ, ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಣೆ ನೀಡಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಮಾವಿನಮರದ ಹೇಳಿದರು.
ಪಟ್ಟಣದ ಸಾಲೇಶ್ವರ ಸಮುದಾಯ ಭವನದಲ್ಲಿ ಪಟ್ಟಸಾಲಿ ನೇಕಾರ ಮಹಿಳಾ ಸಂಘ ದಸರಾ ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೈಮಗ್ಗ ನೇಕಾರಿಕೆಯೊಂದಿಗೆ ಸಾರ್ಥಕ ಬದುಕು ಕಟ್ಟಿಕೊಂಡಿರುವ ನೇಕಾರ ಮಹಿಳೆಯರು ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಹೆಮ್ಮೆ ತರುವಂತಹ ವಿಷಯ. ಪ್ರತಿಯೊಬ್ಬ ಮಹಿಳೆಯರಲ್ಲಿ ಸಾಂಸ್ಕೃತಿಕ, ಕ್ರಿಯಾತ್ಮಕ, ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮತ್ತು ಸಂಘಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಟ್ಟಸಾಲಿ ನೇಕಾರ ಮಹಿಳಾ ಸಂಘ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ ಮಾತನಾಡಿದರು. ರಾಷ್ಟ್ರಮಟ್ಟದಲ್ಲಿ ಗುಳೇದಗುಡ್ಡ ಕಣ ಪ್ರದರ್ಶಿಸಿದ ರವಿ ಜಡಗಿ, ಸಂಗೀತ ಕಲಾವಿದ ಶಂಕರ ಸನಪಾ, ಹಿರಿಯ ಪತ್ರಕರ್ತ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ರಾಜನಾಳ, ಶರಣಬಸವ ಶ್ರೀ ಪ್ರಶಸ್ತಿ ಪುರಸ್ಕೃತ ಮಾಲಾ ರಾಜನಾಳ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಮಾಜಿ ಸದಸ್ಯ ಶಿವಾನಂದ ಎಣ್ಣಿ, ಸುರೇಶ ಮೆಗೆನ್ನಿ, ಪಟ್ಟಸಾಲಿ ನೇಕಾರ ಮಹಿಳಾ ಸಂಘದ ಗಿರಿಜಾ ಕಲ್ಯಾಣಿ ನಾಗಮ್ಮ ಎನ್ನಿ, ಶಶಿಕಲಾ ಭಾವಿ, ದ್ರಾಕ್ಷಾಯಿಣಿ ಗೊಬ್ಬಿ, ಮಂಜುಳಾ ತಿಪ್ಪಾ, ತಾರಾಮತಿ ರೋಜಿ, ವೇದಾ ಶೀಪ್ರೀ, ಮೀನಾಕ್ಷಿ ಜಡಗಿ, ಅನಸೂಯಾ ಅಲದಿ, ಅನಿತಾ ಶಿರೋಳ, ಮುರಿಗೆವ್ವ ಸಾರಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.