ಹಗರಿಬೊಮ್ಮನಹಳ್ಳಿ: ಪಟ್ಟಣದ ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಮತ್ತು ಕರ್ಮಯೋಗ ಟ್ರಸ್ಟ್‌ನ ಕರಾಟೆ ಪಟು ನಬೀ ಸಾಹೇಬ್ ಈಚೆಗೆ ಮಲೇಷಿಯಾದ ಪಿರಾಕ್ ಸ್ಟೇಟ್ಸ್‌ನ ಇಫೋ ನಗರದಲ್ಲಿ ನಡೆದ 21ನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಕಾಡೆಮಿಯ ತಾಂತ್ರಿಕ ನಿರ್ದೇಶಕ ಎಂ. ಸುಭಾಷ್‍ಚಂದ್ರ 40 ವರ್ಷ ಒಳಗಿನ ವಯೋಮಿತಿಯ ಕುಮಿತೆ-67 ಕೆಜಿ ವಿಭಾಗದಲ್ಲಿ ನಬೀ ಸಾಹೇಬ್ ಪ್ರಥಮ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪಟ್ಟಣದಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅವರ ಸಾಧನೆಗೆ ಕರ್ಮಯೋಗ ಟ್ರಸ್ಟ್‌ನ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್ ಹರ್ಷ ವ್ಯಕ್ತಪಡಿಸಿದ್ದಾರೆ. ಮುತ್ಕೂರು ಸುಭಾಷ್‍ಚಂದ್ರ, ತರಬೇತುದಾರರ ಎಸ್. ಆತೀಫ್ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.