ADVERTISEMENT

ಕೊಟ್ಟೂರು: ಪಶು ವೈದ್ಯರ ನೇಮಕಕ್ಕೆ ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:56 IST
Last Updated 3 ಫೆಬ್ರುವರಿ 2026, 1:56 IST
ಕೊಟ್ಟೂರಿನ ಪಶು ಆಸ್ಪತ್ರೆಯಲ್ಲಿ ಶನಿವಾರ ನಡೆದ ಹಸು, ಕುರಿ ಸಾಕಾಣಿಕೆದಾರರ ತರಬೇತಿ ಶಿಬಿರದಲ್ಲಿ ಪಶು ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಮಾತನಾಡಿದರು
ಕೊಟ್ಟೂರಿನ ಪಶು ಆಸ್ಪತ್ರೆಯಲ್ಲಿ ಶನಿವಾರ ನಡೆದ ಹಸು, ಕುರಿ ಸಾಕಾಣಿಕೆದಾರರ ತರಬೇತಿ ಶಿಬಿರದಲ್ಲಿ ಪಶು ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಮಾತನಾಡಿದರು   

ಕೊಟ್ಟೂರು: ‘ಅಮೃತ ಸ್ವಾಭಿಮಾನಿ ಯೋಜನೆಯ ಫಲಾನುಭವಿಗಳು ಸಾಲ ಮರು ಪಾವತಿ ಮಾಡದ ಕಾರಣ ಕುರಿಗಾರರಿಗೆ ಪೂರೈಕೆಯಾಗಬೇಕಿದ್ದ ಸೌಲಭ್ಯಗಳಲ್ಲಿ ಕಡಿತವಾಗತೊಡಗಿವೆ’ ಎಂದು ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಹೇಳಿದರು.

ಪಟ್ಟಣದ ಪಶು ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದೊಂದಿಗೆ ಶನಿವಾರ ರೈತರಿಗೆ ಏರ್ಪಡಿಸಿದ್ದ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರದಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ 1180 ಹಸು ಮತ್ತು ಎಮ್ಮೆಗಳು,  12,500 ಕುರಿ ಮತ್ತು ಮೇಕೆಗಳಿವೆ. ಇವುಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡುಬಂದಿದೆ’ ಎಂದರು.

‘ಜಿಲ್ಲೆಯಾದ್ಯಂತ 400 ಪಶು ವೈದ್ಯರ ಅವಶ್ಯಕತೆ ಇದೆ. ಆದರೆ ಕೇವಲ 140 ವೈದ್ಯರಿರುವುದರಿಂದ ಸಕಾಲಕ್ಕೆ ಚಿಕಿತ್ಸೆ ನೀಡಲು ವಿಳಂಬವಾಗುತ್ತಿದ್ದು ಸಾಕಾಣಿಕದಾರರು ತಾಳ್ಮೆಯಿಂದ ನಡೆದುಕೊಳ್ಳಬೇಕು’ ಎಂದರು.

ADVERTISEMENT

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಹೋಬಳಿ ಘಟಕದ ಅಧ್ಯಕ್ಷ ಉಜ್ಜಿನಿ ರುದ್ರಪ್ಪ ಮಾತನಾಡಿ, ‘ಜಿಲ್ಲೆಯಲ್ಲಿಯೇ ನಮ್ಮ ತಾಲ್ಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಕುರಿ ಮತ್ತು ಮೇಕೆಗಳಿರುವುದರಿಂದ ಕುರಿಗಾರರಿಗೆ ಪ್ರತ್ಯೇಕ ಪಶು ಆಸ್ಪತ್ರೆ ತೆರೆಯಬೇಕು’ ಎಂದು ಒತ್ತಾಯಿಸಿದರು.

ಪಶು ವೈದ್ಯಾಧಿಕಾರಿ ಡಾ. ಚಂದ್ರನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಕೊಟ್ರೇಶ್, ಡಾ. ವಿಲಾಸ್. ಡಾ. ವಿಜಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕಾಧ್ಯಕ್ಷ ಯೋಗೀಶ್ವರ ದಿನ್ನೆ, ರೇವಣ್ಣ ನಾಯ್ಕ. ಅಂಬರೀಶ ನಾಯ್ಕ. ಮೂಗಪ್ಪ ಇದ್ದರು.

ತಾಲ್ಲೂಕಿನಲ್ಲಿ ಒಬ್ಬರೇ ಪಶು ವೈದ್ಯರಿರುವುದರಿಂದ ಸ್ವಾಭಾವಿಕವಾಗಿ ಸತ್ತ ಕುರಿಗಳನ್ನು ಮರಣೋತ್ತರ ಪರೀಕ್ಷೆ ಮಾಡುವುದು ಕಷ್ಟವಾಗುತ್ತದೆ. ಸರ್ಕಾರ ಕೂಡಲೇ ಪಶು ವೈದ್ಯರ ನೇಮಕಕ್ಕೆ ಮುಂದಾಗಬೇಕು
ಉಜ್ಜಿನಿ ರುದ್ರಪ್ಪ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಹೋಬಳಿ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.