ADVERTISEMENT

ಕಲಾ ವಿಭಾಗ: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಕಾಲೇಜಿಗೆ 9 ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 7:31 IST
Last Updated 15 ಏಪ್ರಿಲ್ 2019, 7:31 IST
ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಸುಮ ಉಜ್ಜಿನಿ ಪೋಷಕರೊಂದಿಗೆ ಸಂಭ್ರಮಿಸಿದರು.
ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಸುಮ ಉಜ್ಜಿನಿ ಪೋಷಕರೊಂದಿಗೆ ಸಂಭ್ರಮಿಸಿದರು.    

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕುಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಒಟ್ಟು 9 ರ‍್ಯಾಂಕ್ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಕಾಲೇಜಿನ ಕುಸುಮಾ ಉಜ್ಜಿನಿ (594 ಅಂಕ), ಹೊಸಮನಿ ಚಂದ್ರಪ್ಪ (591), ನಾಗರಾಜ್ (591), ಎಸ್‌.ಓಮೇಶ (591), ಕೆ.ಜಿ.ಸಚಿನ್ (589), ಎಚ್‌.ಸುರೇಶ (589), ಹರಿಜನಸೊಪ್ಪಿನ ಹುಚ್ಚೆಂಗಮ್ಮ (588), ನಂದೀಶ ಮಠದ (588) ಮತ್ತು ಸರಸ್ವತಿ ಅಂಗಡಿ (587) ರಾಜ್ಯದಲ್ಲಿಯೇ ಅತಿಹೆಚ್ಚು ಅಂಕಪಡೆದು ಸಾಧನೆ ಮೆರೆದಿದ್ದಾರೆ.

ಕುಸುಮ ಉಜ್ಜಿನಿಪಟ್ಟಣದ ದೇವೇಂದ್ರಪ್ಪ–ಜಯಮ್ಮ ದಂಪತಿಯಪುತ್ರಿಯಾಗಿದ್ದು, ದೇವೇಂದ್ರಪ್ಪ ಅವರು ಪಂಕ್ಚರ್ ಶಾಪ್ ನಡೆಸಿ ಜೀವನ ನಡೆಸುತ್ತಿದ್ದಾರೆ.

ADVERTISEMENT

‘ರಾಜ್ಯಕ್ಕೆಪ್ರಥಮ ಸ್ಥಾನಪಡೆದಿದ್ದು ಸಂತಸ ತಂದಿದೆ.ಇಂತಿಷ್ಟು ಸಮಯವೆಂದು ನಿಗದಿ ಪಡೆಸಿಕೊಳ್ಳದೆ, ಇಷ್ಟವಾದ ವಿಷಯ ಓದುತ್ತಿದ್ದೆ.ಬಿಡುವಿನ ವೇಳೆಯಲ್ಲಿ ಪಂಕ್ಚರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಗುರುಗಳ ಹಾಗೂ ತಂದೆ ತಾಯಿ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ’ ಎಂದು ಕುಸುಮ ತಮ್ಮ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ದಾವಣಗೆರೆ ಹರಪನಹಳ್ಳಿ ತಾಲ್ಲೂಕಿನ ಶಿವಕುಮಾರ ಬಾರಿಕಾರ 589 ಅಂಕ ಪಡೆದು, ಕಲಾ ವಿಭಾಗದಲ್ಲಿ ಅತಿಹೆಚ್ಚು ಅಂಕ ಪಡೆದ 10 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.