ADVERTISEMENT

ಕುರುಗೋಡು: ಆದಿವಾಸಿಗಳ ಭೂ ಕಬಳಿಕೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:57 IST
Last Updated 13 ಡಿಸೆಂಬರ್ 2025, 5:57 IST
ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿದರು
ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿದರು   

ಕುರುಗೋಡು: ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಎದುರು ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಪದಾಧಿಕಾರಿಗಳು ಒಡಿಶಾ ರಾಜ್ಯದಲ್ಲಿ ಆದಿವಾಸಿಗಳ ಭೂ ಕಬಳಿಕೆ ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಲವಂತದ ಭೂ ಸ್ವಾಧೀನ ಕ್ರಮಕ್ಕೆ ಮುಂದಾಗಿರುವವರ ವಿರುದ್ಧ ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಬಡ ಆದಿವಾಸಿಗಳ ಕೃಷಿಯೋಗ್ಯ ಜಮೀನು ಬಲವಂತದಿಂದ ಕಸಿದುಕೊಂಡು ಜಿಂದಾಲ್ ಮತ್ತು ಪೋಸ್ಕೊದಂತಹ ಅಂತರರಾಷ್ಟ್ರೀಯ ಕಂಪನಿಗಳಿಗೆ ಹಂಚಿಕೆ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಹೋರಾಟದಲ್ಲಿ ತೊಡಗಿದ್ದ ಸಂಘಟನೆಗಳ ಮುಖಂಡರಾದ ಸತ್ಯವಾನ್ ಮತ್ತು ಸದಾಶಿವದಾಸ್ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಮುಖಂಡರಾದ ಕೋಳೂರು ಪಂಪಾಪತಿ, ಮೌಲಾಸಾಬ್, ಮಸ್ತಾನಪ್ಪ, ಗುರುಶೇಖರ್, ಶಿವಪ್ಪ, ಮಸ್ತಾನ್ ಸಾಬ್, ಮಲ್ಲಯ್ಯ, ಜಂಬಣ್ಣ, ತಿಮ್ಮಪ್ಪ ಮತ್ತು ದೊಡ್ಡಮೌಲಾಸಾಬ್ ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.