ವೀರಭದ್ರ ಶಿವಾಚಾರ್ಯ ಸ್ವಾಮೀಜಿ
ತೆಕ್ಕಲಕೋಟೆ(ಬಳ್ಳಾರಿ ಜಿಲ್ಲೆ): ತೆಕ್ಕಲಕೋಟೆ ಪಟ್ಟಣದ ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ( 69) ಬುಧವಾರ ಲಿಂಗೈಕ್ಯರಾದರು.
ಉಜ್ಜಯಿನಿ ಸದ್ಧರ್ಮ ಪೀಠದ ಲಿಂಗೈಕ್ಯ ಸಿದ್ದೇಶ್ವರ ಭಗವತ್ಪಾದ ಸ್ವಾಮೀಜಿಗಳಿಂದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು 1971ರಲ್ಲಿ ತಮ್ಮ 16ನೇ ವಯಸ್ಸಿನಲ್ಲೇ ಶಿವಾಚಾರ್ಯ ದೀಕ್ಷೆ ಹಾಗೂ ಗುರು ಪಟ್ಟಾಧಿಕಾರವನ್ನು ಪಡೆದಿದ್ದರು.
ಶ್ರೀಗಳ ಅಂತಿಮ ಸಂಸ್ಕಾರವನ್ನು ಪಟ್ಟಣದ ಶ್ರೀ ಸದ್ಧರ್ಮ ಜ್ಞಾನ ಚೇತನ ಆವರಣದ ಹೊಸಮಠದಲ್ಲಿ ಇಂದು (ಬುಧವಾರ) ಸಂಜೆ 5ಗಂಟೆಗೆ ನೆರವೇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.
ಅಂತಿಮ ಸಂಸ್ಕಾರದಲ್ಲಿ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.