ADVERTISEMENT

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ: ಮದುವೆ ಪಾಸ್‌ ವಿತರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 11 ಮೇ 2021, 12:43 IST
Last Updated 11 ಮೇ 2021, 12:43 IST
ಸಾರ್ವಜನಿಕರೊಬ್ಬರು ಮಂಗಳವಾರ ಹೊಸಪೇಟೆಯಲ್ಲಿ ಮದುವೆ ಪಾಸ್‌ ಪಡೆಯಲು ಬಂದಿದ್ದರು. ಪಾಸ್ ವಿತರಣೆ ಕಾರ್ಯ ಸ್ಥಗಿತಗೊಳಿಸಿರುವ ವಿಷಯ ತಿಳಿದು ಹಿಂತಿರುಗಿದರು
ಸಾರ್ವಜನಿಕರೊಬ್ಬರು ಮಂಗಳವಾರ ಹೊಸಪೇಟೆಯಲ್ಲಿ ಮದುವೆ ಪಾಸ್‌ ಪಡೆಯಲು ಬಂದಿದ್ದರು. ಪಾಸ್ ವಿತರಣೆ ಕಾರ್ಯ ಸ್ಥಗಿತಗೊಳಿಸಿರುವ ವಿಷಯ ತಿಳಿದು ಹಿಂತಿರುಗಿದರು   

ಹೊಸಪೇಟೆ(ವಿಜಯನಗರ): ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳನ್ನು ನಿ‌ರ್ಬಂಧಿಸಿರುವುದರಿಂದ ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಪಾಸ್‌ ವಿತರಣೆ ಸ್ಥಗಿತಗೊಳಿಸಲಾಗಿದೆ.

ಸೋಮವಾರ ಸರತಿ ಸಾಲಿನಲ್ಲಿ ನಿಂತುಕೊಂಡು ಜನ ಪಾಸ್‌ಗಳನ್ನು ಪಡೆದುಕೊಂಡಿದ್ದರು. ಮಂಗಳವಾರವೂ ಪಾಸ್‌ ಪಡೆಯಲು ಬಂದಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶದ ಪ್ರತಿ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಅಂಟಿಸಿರುವುದನ್ನು ನೋಡಿ ಹಿಂತಿರುಗಿದರು.

‘ಮೇ 13ರಂದು ಕೂಡ್ಲಿಗಿಯಲ್ಲಿ ಮದುವೆ ನಿಶ್ಚಯವಾಗಿದೆ. ಈಗಾಗಲೇ ಪಾಸ್ ಸಹ ಕೂಡ್ಲಿಗಿ ತಾಲ್ಲೂಕು ಆಡಳಿತದಿಂದ ಪಡೆದಿರುವೆ. ಈಗ ಹೊಸಪೇಟೆಯಿಂದ ಕೂಡ್ಲಿಗಿಗೆ ತೆರಳಲು ಅವಕಾಶ ಇಲ್ಲವೆಂದು ಹೇಳುತ್ತಿದ್ದಾರೆ. ಏನು ಮಾಡುವುದು ತೋಚುತ್ತಿಲ್ಲ’ ಎಂದು ಮದುವೆ ಪಾಸ್ ಪಡೆದ ಗಿಂಜಿ ಚಂದ್ರು ಗೋಳು ತೋಡಿಕೊಂಡರು.

ADVERTISEMENT

ಈ ಮೊದಲು ಜಿಲ್ಲಾಡಳಿತವು 50 ಜನರೊಂದಿಗೆ ಮದುವೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ನಂತರ ಆ ಸಂಖ್ಯೆ 40ಕ್ಕೆ ಇಳಿಸಿತ್ತು. ಈಗ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.