ADVERTISEMENT

ಕಮಲಾಪುರ: ವಠಾರಗಳಲ್ಲಿ ಪಾಠ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:54 IST
Last Updated 13 ಜುಲೈ 2020, 14:54 IST
ಕಮಲಾಪುರ ತಾಲ್ಲೂಕಿನ ನೀಲಕೂಡ ಗ್ರಾಮದಲ್ಲಿ ವಠಾರಗಳಿಗೆ ತೆರಳಿ ಶಿಕ್ಷಕಿ ಪಾಠ ಮಾಡುತ್ತಿರುವುದು
ಕಮಲಾಪುರ ತಾಲ್ಲೂಕಿನ ನೀಲಕೂಡ ಗ್ರಾಮದಲ್ಲಿ ವಠಾರಗಳಿಗೆ ತೆರಳಿ ಶಿಕ್ಷಕಿ ಪಾಠ ಮಾಡುತ್ತಿರುವುದು   

ಕಮಲಾಪುರ: ತಾಲ್ಲೂಕಿನ ನೀಲಕೂಡ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರು ಮನೆ, ವಠಾರಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.

8ನೇ ತರಗತಿ ವರೆಗೆ ಶಾಲೆ ಇದ್ದು, 5 ಜನ ಶಿಕ್ಷಕರು, 90 ವಿದ್ಯಾರ್ಥಿಗಳಿದ್ದಾರೆ. ಸದ್ಯ ಗ್ರಾಮದಲ್ಲಿ 50 ವಿದ್ಯಾರ್ಥಿಗಳು ಸಿಗುತ್ತಿದ್ದಾರೆ. ವಿವಿಧ ಬೀದಿ, ವಠಾರ ಮನೆ ಎಲ್ಲೆಂದರಲ್ಲಿ ಭೇಟಿ ಮಾಡಿ ಪಾಠ ಪುನರಾರ್ವತನೆ ಮಾಡಿಸಲಾಗುತ್ತಿದೆ.

ಕೋವಿಡ್ ಮುಂಜಾಗ್ರತೆ ವಹಿಸಲಾಗುತ್ತಿದೆ. ಮಕ್ಕಳಿಗೂ ಅರಿವು ಮೂಡಿಸಲಾಗುತ್ತಿದೆ. ಪಾಲಕರು, ಎಸ್‍ಡಿಎಂಸಿ ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕಿ ರೇಣುಕಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.