ADVERTISEMENT

ಯುವಕನಿಂದ ಯಶಸ್ವಿ ಪರ್ವತಾರೋಹಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 14:14 IST
Last Updated 13 ಸೆಪ್ಟೆಂಬರ್ 2021, 14:14 IST
ಜಮ್ಮು ಮತ್ತು ಕಾಶ್ಮೀರದ ಟುಲಿಯನ್‌ ಲೇಕ್‌ನಲ್ಲಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿದ ಹೊಸಪೇಟೆಯ ಕಟಗಿ ರಮೇಶ ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸಿದ ಪರಿ
ಜಮ್ಮು ಮತ್ತು ಕಾಶ್ಮೀರದ ಟುಲಿಯನ್‌ ಲೇಕ್‌ನಲ್ಲಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿದ ಹೊಸಪೇಟೆಯ ಕಟಗಿ ರಮೇಶ ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸಿದ ಪರಿ   

ಹೊಸಪೇಟೆ (ವಿಜಯನಗರ): ಜನರಲ್‌ ತಿಮ್ಮಯ್ಯ ನ್ಯಾಷನಲ್‌ ಅಕಾಡೆಮಿಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪೆಹಲ್‌ಗಾಮ್‌ ಜಿಲ್ಲೆಯ ‘ಟುಲಿಯನ್‌ ಲೇಕ್‌’ನಲ್ಲಿ ಏರ್ಪಡಿಸಿದ್ದ ಪರ್ವತಾರೋಹಣ ಸಾಹಸ ತರಬೇತಿಯಲ್ಲಿ ಇಲ್ಲಿನ ಚಿತ್ತವಾಡ್ಗಿ ಇಪ್ಪಿತ್ತೇರಿ ಮಾಗಾಣಿಯ ಕಟಗಿ ರಮೇಶ ಭಾಗವಹಿಸಿದ್ದರು.

ಮಂಜಿನಿಂದ ಆವರಿಸಿಕೊಂಡ 16,500 ಅಡಿ ಎತ್ತರದ ಪರ್ವತವನ್ನು 22 ಗಂಟೆಗಳಲ್ಲಿ ಹತ್ತಿದ್ದಾರೆ. ಯಶಸ್ವಿಯಾಗಿ ತರಬೇತಿ ಪೂರೈಸಿದ ಅವರು ಹಿಮಾಲಯ ಪರ್ವತಾರೋಹಣಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ನಗರದ ಒಳಾಂಗಣ ಕ್ರೀಡಾಂಗಣದ ಈಜು ಕೊಳದಲ್ಲಿ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿರುವ ರಮೇಶ, ರಾಮು ಎಂಬ ಹೆಸರಿನಿಂದ ಎಲ್ಲರಿಗೂ ಚಿರಪರಿಚಿತ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.