
ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಬಳಗ ಆಯೋಜಿಸಿದ್ದ ಇಂಡ್ಲವಾಡಿ ಗ್ರಾ.ಪಂ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಬಸವನಪುರ ತಂಡ ಜಯ ಸಾಧಿಸಿದ್ದು, ₹20ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ.
ಚಿಕ್ಕಹೊಸಹಳ್ಳಿ ತಂಡವು ರನ್ನರ್‌ಅಪ್ ಆಗಿದ್ದು, ₹10ಸಾವಿರ ನಗದು ಮತ್ತು ಟ್ರೋಫಿ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮಗಳಿಂದಲೂ ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಗ್ರಾಮದ ಯುವಕರಲ್ಲಿ ಒಗ್ಗಟ್ಟು ಮೂಡಿಸುವುದು ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳಲ್ಲಿ ಒಂದಾದ ಸಮಾನತೆಯನ್ನು ಮೂಡಿಸುವುದು ನಮ್ಮ ಗುರಿಯಾಗಿದೆ ಎಂದು ಜೈಭೀಮ್ ಯುವಕರ ಬಳಗದ ಪ್ರಶಾಂತ್ ತಿಳಿಸಿದರು.
ಬಳಗದ ಸಂತೋಷ್, ಕೇಶವ, ಶಿವರಾಜು, ಸತೀಶ್, ಮೋಹನ್, ರಾಮಮೂರ್ತಿ, ರಾಹುಲ್, ಸಂದೀಪ್, ದರ್ಶನ್, ಪ್ರಶಾಂತ್, ಅಜಿತ್, ಸುನೀಲ್, ಶಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.