
ಆನೇಕಲ್: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಅಂದಾಜು ₹80.90 ಕೋಟಿ ಮೌಲ್ಯದ 16 ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ.
ತಾಲ್ಲೂಕಿನ ವಿವಿಧೆಡೆ ಜಿಲ್ಲಾಧಿಕಾರಿ ಜಗದೀಶ್ ಮತ್ತು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಅವರ ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿದರು.
ಬೇಕಾದುದ್ದು ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಆನೇಕಲ್ ತಾಲ್ಲೂಕಿನಲ್ಲಿರುವ ಸರ್ಕಾರಿ ಜಾಗಗಳ ಸಂರಕ್ಷಣೆಗೆ ಒತ್ತು ನೀಡಿ ಸರ್ಕಾರಿ ಭೂಮಿಯನ್ನು ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ವಹಿಸಲಾಗುವುದು. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ₹80.90ಕೋಟಿ ಅಂದಾಜು ಮೌಲ್ಯದ 16 ಎಕರೆ ಸರ್ಕಾರಿ ಜಮೀನುಗಳಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಗದೀಶ್ ತಿಳಿಸಿದರು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಎಡಿಎಲ್‌ಆರ್ ಮದನ್, ಬೆಂಗಳೂರು ಗ್ರಾಮಾಂತರ ಪೊಲೀಸ್ ಎಎಸ್ಪಿ ನಾಗರಾಜು, ಡಿವೈಎಸ್ಪಿ ಮೋಹನ್ ಕುಮಾರ್, ಜಿಗಣಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಇದ್ದರು.
ಎಲ್ಲೆಲ್ಲಿ?: ತಾಲ್ಲೂಕಿನ ಕಸಬಾ ಹೋಬಳಿಯ ಮರಸೂರು ಗ್ರಾಮದ ಸರ್ವೆ ನಂ.499ರಲ್ಲಿ ಅಂದಾಜು 0.02 ಗುಂಟೆ ಸರ್ಕಾರಿ ಭೂಮಿ, ಅತ್ತಿಬೆಲೆ ಹೋಬಳಿಯ ಇಂಡ್ಲಬೆಲೆ ಗ್ರಾಮದ ಸರ್ವೆ ನಂ. 131ರಲ್ಲಿನ ರಾಜಕಾಲುವೆಯ 0.30.
ಯಡವನಹಳ್ಳಿ ಗ್ರಾಮದ ಸರ್ವೆ ನಂ.164ರಲ್ಲಿ ಅಂದಾಜು ₹20ಲಕ್ಷ ಮೌಲ್ಯದ ಸರ್ಕಾರಿ ಭೂಮಿ, ಜಿಗಣಿ ಹೋಬಳಿ ಕೊಪ್ಪ ಗ್ರಾಮದ ಸರ್ವೆ ನಂ.110ರಲ್ಲಿ ಗೋಮಾಳದಲ್ಲಿನ 5.21ಎಕರೆ ಅಂದಾಜು ₹60ಕೋಟಿ ಮೌಲ್ಯದ ಸರ್ಕಾರಿ ಜಾಗ, ಸರ್ಜಾಪುರ ಹೋಬಳಿಯ ದೊಮ್ಮಸಂದ್ರ ತಿಗಳಚೌಡದೇನಹಳ್ಳಿ ಗ್ರಾಮದ ಸರ್ವೆ ನಂ.214/1ಎ, 84/2ರ ರಾಜಕಾಲುವೆಯಲ್ಲಿನ ಅಂದಾಜು ₹50ಲಕ್ಷ ಮೌಲ್ಯದ 0.10ಗುಂಟೆ ಸರ್ಕಾರಿ ಜಾಗ, ಅಡಿಗಾರಕಲ್ಲಹಳ್ಳಿ ಗ್ರಾಮದ ಸರ್ವೆ ನಂ.65ರಲ್ಲಿ ಸರ್ಕಾರಿ ಕೆರೆಯಲ್ಲಿ ಅಂಆಜು ₹62 ಲಕ್ಷ ಮೌಲ್ಯದ 0.20 ಗುಂಟೆಯ ಸರ್ಕಾರಿ ಜಾಗ.
ಗೋಮಾಳ ಜಾಗಕ್ಕೆ ನಮೂನೆ 53 ಸಲ್ಲಿಸಿದ್ದ ರೈತರು: ತಾಲ್ಲೂಕಿನ ಜಿಗಣಿ ಸಮೀಪದ ಕೊಪ್ಪ ಗ್ರಾಮದಲ್ಲಿ ಸರ್ಕಾರಿ ಜಾಗದ ಸರ್ವೆ ನಂ.110ರಲ್ಲಿ 5 ಎಕರೆ ಗೋಮಾಳ ಜಾಗದವಿದ್ದು ರೈತರು ಜಮೀನು ಮಂಜೂರಾತಿಗಾಗಿ ಫಾರಂ 53ರಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮಂಜೂರು ದಾಖಲೆಯು ನಕಲಿಯಾಗಿರುವುದು ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.