ವಿಜಯಪುರ (ದೇವನಹಳ್ಳಿ): ಗುರು ಪೂರ್ಣಿಮೆ ಅಂಗವಾಗಿ ಗುರುವಾರ ಪಟ್ಟಣದ ಮೇಲೂರು ರಸ್ತೆಯ ಬಸವಕಲ್ಯಾಣ ಮಠದಲ್ಲಿ ಸಿದ್ದಲಿಂಗೇಶ್ವರ ದೇವಾಲಯ ಪ್ರತಿಷ್ಠಾಪನೆ ಮತ್ತು ಬಸವ ಜಯಂತಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.
ಜೀವನದಲ್ಲಿ ಗುರುವಿನ ಮಹತ್ವ ತಿಳಿಸಿದ ವನಕಲ್ಲು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ರಮಾನಂದ ಸ್ವಾಮೀಜಿ ಹಾಗೂ ಬಸವ ಕಲ್ಯಾಣ ಮಠಾಧ್ಯಕ್ಷ ಮಹದೇವ ಸ್ವಾಮೀಜಿ, ಅಜ್ಞಾನ ಹೋಗಲಾಡಿಸಿ ಜ್ಞಾನ ಎಂಬ ಬೆಳಕು ನೀಡುವವನೇ ಗುರು ಎಂದರು.
ಬಸವಕಲ್ಯಾಣ ಮಠದ ಕಿರಿಯ ಸದಾಶಿವ ಸ್ವಾಮೀಜಿ, ದೊಡ್ಡಬಳ್ಳಾಪುರದ ಬಸವೇಶ್ವರ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮಿಜಿ, ಬೆಂಗಳೂರಿನ ಅಕ್ಕಿ ಪೇಟೆಯ ದೊಡ್ಡ ಮಠದ ಶಿವಬಸವ ಸ್ವಾಮೀಜಿ, ಕೊಳ್ಳಿಪುರದ ಗುರುಪಾದ ಸ್ವಾಮೀಜಿ, ಬಿಡದಿಯ ಹುಚ್ಚಪ್ಪ ಸ್ವಾಮೀಜಿ, ಮೈಸೂರು ಪಾಳ್ಯದ ಶಿವಮೂರ್ತಿ ಶ್ರೀ, ಹುಬ್ಬಳ್ಳಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಠದ ಕಾರ್ಯದರ್ಶಿ ಪಿ.ಸಿ ಜಯಕುಮಾರ್, ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಅಂಕತಟ್ಟಿ ಗ್ರಾಮದ ಎಂಪಿಸಿಎಸ್ ಸದಸ್ಯ ನಾರಾಯಣಸ್ವಾಮಿ, ಪುರ ಗ್ರಾಮದ ನಂಜುಂಡಪ್ಪ, ಪಿ.ರಂಗನಾಥಪುರದ ನಂದೀಶ್, ಬಿ.ಎಂ.ಗಣೇಶ್, ಬಿ.ರಾಜಣ್ಣ ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.