ADVERTISEMENT

ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ ₹1.26 ಕೋಟಿ ಮೌಲ್ಯದ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2023, 13:49 IST
Last Updated 17 ನವೆಂಬರ್ 2023, 13:49 IST
ಆರೋಪಿತರಿಂದ ವಶಕ್ಕೆ ಪಡೆದ ಚಿನ್ನದ ಸರ
ಆರೋಪಿತರಿಂದ ವಶಕ್ಕೆ ಪಡೆದ ಚಿನ್ನದ ಸರ   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕಳೆದೆರಡು ದಿನಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹1.26 ಕೋಟಿ ಮೌಲ್ಯದ ಎರಡು ಕೆ.ಜಿ ಚಿನ್ನವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶ ಪಡೆಸಿಕೊಂಡಿದ್ದಾರೆ.

ಗುರುವಾರ ತಡರಾತ್ರಿ ಬ್ಯಾಂಕಾಕ್‌ ಬಂದ ಮೂವರು ಪ್ರಯಾಣಿಕರು ಹಾಗೂ ಕೊಲಂಬೋದಿಂದ ಬಂದ ಇಬ್ಬರು ಮಹಿಳಾ ಪ್ರಯಾಣಿಕರನ್ನು ತಪಾಸಣೆ ನಡೆಸಿದ ವೇಳೆ ಚಿನ್ನದ ಸರವನ್ನು ಅಂಗಿಯ ಕಲರ್‌ನಲ್ಲಿ ಹಾಗೂ ಒಳಉಡುಪಿನಲ್ಲಿ ಬಚ್ಚಿಟ್ಟಿಕೊಂಡು ಕಳ್ಳ ಸಾಗಣೆ ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಇವರಿಂದ ಒಟ್ಟು 966 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ ₹58,39,806 ಎಂದು ಅಂದಾಜಿಸಲಾಗಿದೆ.

ಮಸ್ಕಟ್‌ನಿಂದ ಶುಕ್ರವಾರ ಆಗಮಿಸಿದ ವ್ಯಕ್ತಿಯೊಬ್ಬ ಸೋಂಟದ ಬೆಲ್ಟ್‌ನಲ್ಲಿ 1.113 ಗ್ರಾಂ ತೂಕದ ಚಿನ್ನದ ಬಿಸ್ಕೆಟ್‌ ಅನ್ನು ಕಳ್ಳ ಸಾಗಣೆ ಮಾಡುತ್ತಿದ್ದ ವೇಳೆ ಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕಿಬಿದಿದ್ದು, ಇದರ ಮೌಲ್ಯ ₹ 68,18,812 ಎಂದು ಅಂದಾಜಿಸಲಾಗಿದೆ.

ADVERTISEMENT

ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವಶಕ್ಕೆ ಪಡೆದ ಚಿನ್ನದ ಬಿಸ್ಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.