ADVERTISEMENT

ಪ್ರೇಮಿಗಳು ಪರಾರಿ: ಪ್ರಿಯಕರನ ಮನೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 20:09 IST
Last Updated 7 ಏಪ್ರಿಲ್ 2021, 20:09 IST
ಆನೇಕಲ್ ತಾಲ್ಲೂಕಿನ ಗೋಣಿಘಟ್ಟಪುರದಲ್ಲಿ ಪ್ರೇಮಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಟ್ಟು ಕರಕಲಾಗಿರುವ ಯುವಕನ ಮನೆಯ ಆವರಣ
ಆನೇಕಲ್ ತಾಲ್ಲೂಕಿನ ಗೋಣಿಘಟ್ಟಪುರದಲ್ಲಿ ಪ್ರೇಮಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಟ್ಟು ಕರಕಲಾಗಿರುವ ಯುವಕನ ಮನೆಯ ಆವರಣ   

ಆನೇಕಲ್: ವಾರದ ಹಿಂದೆ ಯುವಪ್ರೇಮಿಗಳಿಬ್ಬರು ಪರಾರಿಯಾದ ಘಟನೆಯಿಂದ ರೊಚ್ಚಿಗೆದ್ದ ಗುಂಪೊಂದು ಬುಧವಾರ ಪ್ರಿಯಕರನ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದೆ.

ಪ್ರೀತಿಸುತ್ತಿದ್ದ ಗೋಣಿಘಟ್ಟಪುರದ ಯುವಕ ಮತ್ತು ಮಾರತ್‌ಹಳ್ಳಿಯ ಯುವತಿಯ ಮದುವೆಗೆ ಕುಟುಂಬದವರ ಒಪ್ಪಿಗೆ ಇರಲಿಲ್ಲ. ಇದರಿಂದ ಹತಾಶರಾದ ಪ್ರೇಮಿಗಳು ವಾರದ ಹಿಂದೆ ಮನೆಬಿಟ್ಟು ಹೋಗಿದ್ದರು.

ಪ್ರೇಮಿಗಳು ಮದುವೆಯಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇಯುವಕನ ಕುಟುಂಬದ ಸದಸ್ಯರು ಕೂಡ ಮನೆಬಿಟ್ಟು ತೆರಳಿದ್ದರು. ಈ ವೇಳೆ ಗುಂಪುವೊಂದು ತಾಲ್ಲೂಕಿನ ಗೋಣಿಘಟ್ಟಪುರದಲ್ಲಿರುವಯುವಕನ ಮನೆಗೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.