
ಸಾಂದರ್ಭಿಕ ಚಿತ್ರ
ಹೊಸಕೋಟೆ: ನಗರದ ಚಂದ್ರು ಶ್ರೀ ಬಾರ್ ಹಾಗೂ ಲಾಡ್ಜ್ ಮೇಲಿನ ಮಹಡಿಯಲ್ಲಿ ಭಾನುವಾರ ರಾತ್ರಿ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ 15 ಮಂದಿ ಬಂಧಿಸಿ, ₹2.52 ಲಕ್ಷ ಜಪ್ತಿ ಮಾಡಿದ್ದಾರೆ.
ಡಿವೈಎಸ್ಪಿ ಮಲ್ಲೇಶ್, ನಗರದ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಗೋವಿಂದ್ ಮತ್ತು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.
ಮಾರುತಿ ನಗರದ ಎಂ.ಚಂದ್ರು, ಕುರುಬರ ಪೇಟೆಯ ಪಿ.ಮಂಜುನಾಥ, ಕೆ.ಮುನಿರಾಜು, ಶ್ರೀನಿವಾಸ, ಮೆಹಬೂಬ್ ಪಾಷ, ನಾಗಣ್ಣ, ಮಂಜುನಾಥ್, ಚಂದ್ರಪ್ಪ, ನಟರಾಜ್, ಅಂಬೇಡ್ಕರ್ ಕಾಲೊನಿಯ ದೇವರಾಜ್, ಕನಕಭವನ ರಸ್ತೆಯ ಲಕ್ಷ್ಮಣ್, ಸೂಲಿಬೆಲೆ ವಾಲ್ಮೀಕಿ ನಗರದ ಶ್ರೀನಾಥ್, ಬಾರ್ ಹಾಗೂ ಲಾಡ್ಜ್ ಉಸ್ತುವಾರಿಗಳಾದ ಪ್ರದೀಪ್, ನಾಗರಾಜ್, ನಗರಸಭೆ ಬಿಲ್ ಕಲೆಕ್ಟರ್ ಗಜೇಂದ್ರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾರ್ ಮಾಲೀಕರ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಮಲ್ಲೇಶ್ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.