ADVERTISEMENT

ತಾವರೆಕೆರೆಯಲ್ಲಿ ಮಕ್ಕಳ ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 2:49 IST
Last Updated 1 ಜನವರಿ 2026, 2:49 IST
ಹೊಸಕೋಟೆ ತಾಲ್ಲೂಕಿನ ಚಿಕ್ಕನಹಳ್ಳಿಯ ಲೆಜೆಂಡ್ಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ಆಹಾರ ಮೇಳ ನಡೆಯಿತು
ಹೊಸಕೋಟೆ ತಾಲ್ಲೂಕಿನ ಚಿಕ್ಕನಹಳ್ಳಿಯ ಲೆಜೆಂಡ್ಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ಆಹಾರ ಮೇಳ ನಡೆಯಿತು   

ತಾವರೆಕೆರೆ(ಹೊಸಕೋಟೆ): ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಲೆಜೆಂಡ್ಸ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ಆಹಾರಮೇಳ ನಡೆಯಿತು.

ಮಕ್ಕಳು ತಮ್ಮ ಪೋಷಕರಿಂದ ಸಸ್ಯಾಹಾರಿ ಮತ್ತು ಮಾಂಸಾಹಾರಿಯ ಬಗೆ ಬಗೆಯ ಆಹಾರ ಸಿದ್ಧಪಡಿಸಿಕೊಂಡು ಮಳಿಗೆಯಲ್ಲಿ ಇಟ್ಟು ಮಾರಾಟ ಮಾಡಿದರು.

ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮತ್ತು ಹೊರಗಿನ ಜಂಕ್ ಪುಡ್ ಆರೋಗ್ಯಕ್ಕೆ ಮಾರಕ ಎಂಬುದನ್ನು ಪ್ರಯೋಗಿಕವಾಗಿ ತಿಳಿಸಲು ಮಕ್ಕಳಿಂದಲೇ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಶಾಲೆಯ ಸಂಸ್ಥಾಪಕ ಯೆರೇಗೌಡ ತಿಳಿಸಿದರು.

ADVERTISEMENT

ಶಾಲೆಯ ಮೇಲ್ವಿಚಾರಕಿ ಕಲಾವತಿ, ಮುಖ್ಯ ಶಿಕ್ಷಕರಾದ ಅರಸಪ್ಪ, ಸಹಶಿಕ್ಷಕರಾದ ಅನುಷ, ಚಂದ್ರಿಕ, ದೀಕ್ಷಿತ, ದಾಮಿನಿ, ವಿನುತ, ಚೈತ್ರ, ಶ್ವೇತಾ, ಹಿಂದುಜಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.