ADVERTISEMENT

ದೇವನಹಳ್ಳಿ: ಮುಂಬೈ ವಿಮಾನ ಹತ್ತು ತಾಸು ವಿಳಂಬ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 13:33 IST
Last Updated 27 ಜುಲೈ 2023, 13:33 IST
ಏರ್‌ ಇಂಡಿಯಾ ವಿಮಾನ (ಸಾಂಧರ್ಭಿಕ ಚಿತ್ರ)
ಏರ್‌ ಇಂಡಿಯಾ ವಿಮಾನ (ಸಾಂಧರ್ಭಿಕ ಚಿತ್ರ)   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜುಲೈ 23ರಂದು ಮುಂಬೈಗೆ ತೆರಳಬೇಕಿದ್ದ ಏರ್‌ ಇಂಡಿಯಾ  ವಿಮಾನ ಹತ್ತು ತಾಸು ತಡವಾಗಿ ನಿರ್ಗಮಿಸಿದೆ.

ಭಾನುವಾರ ಸಂಜೆ 7.35ಕ್ಕೆ ಹೊರಡಬೇಕಿದ್ದ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಮರುದಿನ ಸೋಮವಾರ ಬೆಳಗಿನ ಜಾವ 5.49ಕ್ಕೆ ಮುಂಬೈಗೆ ಪ್ರಯಾಣ ಬೆಳಿಸಿದೆ. 

ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ತಕ್ಷಣ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಂಪೂರ್ಣ ವಿಮಾನವನ್ನು ತಪಾಸಣೆ ನಡೆಸಲಾಯಿತು. ಆ ಹೊತ್ತಿಗಾಗಲೇ ವಿಮಾನದ ಸಿಬ್ಬಂದಿ ಕೆಲಸದ ಅವಧಿ ಮುಗಿದಿತ್ತು. ಪರ್ಯಾಯ ಸಿಬ್ಬಂದಿ ವ್ಯವಸ್ಥೆ ಮಾಡಲು ಮತ್ತಷ್ಟು ತಡವಾಯಿತು ಎಂದು ಕೆಲವು ಪ್ರಯಾಣಿಕರು ತಮಗಾದ ತೊಂದರೆಯನ್ನು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಂಡಿದ್ದಾರೆ. 

ADVERTISEMENT

ತುರ್ತು ಕೆಲಸದ ಮೇಲೆ ಮುಂಬೈಗೆ ತೆರಳಬೇಕಿದ್ದ ಕೆಲವು ಪ್ರಯಾಣಿಕರನ್ನು ಬೇರೆ ವಿಮಾನಗಳಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಯಿತು. ಇನ್ನುಳಿದ ಪ್ರಯಾಣಿಕರನ್ನು ಸ್ಥಳೀಯ ಹೊಟೇಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಯಿತು.ವಿಮಾನ ಹಾರಾಟದ ವ್ಯತ್ಯಯದ ಕುರಿತು ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗೆ ಸಮರ್ಪಕ ಮಾಹಿತಿ ಇರಲಿಲ್ಲ ಎಂದು ಟೀಕಿಸಿದ್ದಾರೆ.

ವಿಮಾನ ಹಾರಾಟ ವ್ಯತ್ಯಯ ಮಾಹಿತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.