
ಸೂಲಿಬೆಲೆ(ಹೊಸಕೋಟೆ): ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈಧ್ಯಕೀಯ ಸೇವಾ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟ ಸಹಯೋಗದಲ್ಲಿ ಹೋಬಳಿಯ ಬೆಂಡಿಗಾನಹಳ್ಳಿ ಗ್ರಾಮದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಜ.21, 22 ರಂದು ತಾಲ್ಲೂಕು ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ. ಸತೀಶ್ ಗೌಡ ತಿಳಿಸಿದ್ದಾರೆ.
ತಾಲ್ಲೂಕಿನ ಪಶುಧನ್ ತಂತ್ರಾಂಶದಲ್ಲಿ ನೊಂದಣಿಯಾಗಿರುವ ಹಸುಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹಸುಗಳಿಗೆ ಯವುದೇ ಕಾರಣಕ್ಕೂ ಉದ್ದೀಪನ ಚುಚ್ಚುಮದ್ದು, ಡ್ರಿಪ್ ನೀಡಿರಕೂಡದು. ಜ.21ರ ಸಂಜೆ 5 ಗಂಟೆಯೊಳಗೆ ತಮ್ಮ ಹಸುಗಳೊಂದಿಗೆ ಆಗಮಿಸಿ ಆಧಾರ್ ಮತ್ತು ತಮ್ಮ ಪೊಟೋ ಸಹಿತ ₹100 ಶುಲ್ಕದೊಂದಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ದಿನಕ್ಕೆ ಕನಿಷ್ಠ 20 ಲೀಟರ್ ಹಾಲು ಕರೆಯುವ ಹಸುಗಳನ್ನು ಮಾತ್ರ ಸ್ಪರ್ಧೆಗೆ ಕರೆತರಬೇಕು. 20 ನಿಮಿಷ ಕಾಲಾವಕಾಶ ನೀಡಲಾಗುವುದು ತೀರ್ಪುಗಾರರ ಸಮ್ಮಖದಲ್ಲಿ ಹಾಲು ಕರೆಯಬೇಕು.
ಪ್ರಥಮ ಸ್ಥಾನ ಪಡೆದ ರಾಸುಗೆ ₹1 ಲಕ್ಷ, ದ್ವೀತಿಯಕ್ಕೆ ₹75 ಸಾವಿರ, ತೃತೀಯಕ್ಕೆ ₹50 ಸಾವಿರ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು ತಿಳಿಸಿದ್ದಾರೆ.
ಬೆಂಗಳೂರು ಡೇರಿ ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಶ್ರೀರಾಮ್, ಬೆಂಡಿಗಾನಹಳ್ಳಿ ಪಶುಅಸ್ಪತ್ರೆಯ ವೈದ್ಯರಾದ ಡಾ. ವಿನಯ್ ಹಳ್ಳಿಕೆರಿ, ತಿಮ್ಮಪ್ಪನಹಳ್ಳಿ ಡೇರಿ ಸಿಇಓ ಶ್ರೀನಿವಾಸ್, ಬಮೂಲ್ ಅಧಿಕಾರಿ ಆನಂದ್, ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ವಿಜಯಕುಮಾರ್, ದೊಡ್ಡಹರಳಗೆರೆ ಜಯರಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.