ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಆನೆ ಹಾವಳಿ ತಡೆಯಲು ರೈಲು ಕಂಬಿ ತಡೆಗೋಡೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:45 IST
Last Updated 5 ಡಿಸೆಂಬರ್ 2019, 19:45 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತಡೆಯಲು ನಿರ್ಮಿಸುತ್ತಿರುವ ರೈಲ್ವೇ ಕಂಬಿಗಳ ತಡೆಗೋಡೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತಡೆಯಲು ನಿರ್ಮಿಸುತ್ತಿರುವ ರೈಲ್ವೇ ಕಂಬಿಗಳ ತಡೆಗೋಡೆ   

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಆನೆ ಮತ್ತು ಮಾನವನ ಸಂಘರ್ಷ ತಡೆಯಲು ಅರಣ್ಯ ಇಲಾಖೆಯು ರೈಲು ಕಂಬಿಗಳನ್ನು ಬಳಸಿ ತಡೆಗೋಡೆ ನಿರ್ಮಿಸುವ ಮೂಲಕ ಆನೆಗಳನ್ನು ತಡೆಯುವ ತಂತ್ರ ಬಳಸುತ್ತಿದ್ದು ಯಶಸ್ವಿಯಾಗಿದೆ.

ನವೆಂಬರ್‌ - ಡಿಸೆಂಬರ್‌ ಬಂತೆಂದರೆ ಆಹಾರ ಅರಸಿ ಕಾಡಾನೆಗಳು ಆಗಿಂದಾಗ್ಗೆ ಕಾಡಿನಿಂದ ಹೊರಬಂದು ರೈತರ ಬೆಳೆಗಳನ್ನು ತಿಂದು ಹಾಳು ಮಾಡುವುದು ಬನ್ನೇರುಘಟ್ಟ ಸುತ್ತಮುತ್ತ ಸಾಮಾನ್ಯ. ಆನೆಗಳ ಹಾವಳಿ ತಡೆಯಲು ರೈತರು ಹೊಲಗಳ ಬಳಿ ಮರಗಳ ಮೇಲೆ ಗುಡಿಸುಲು ಕಟ್ಟಿ ರಾತ್ರಿ ಕಾವಲು ಕಾಯುವುದು ಆನೇಕಲ್‌ ತಾಲ್ಲೂಕಿನ ತಮ್ಮನಾಯಕನಹಳ್ಳಿ, ಚೂಡಹಳ್ಳಿ, ಶಿವನಹಳ್ಳಿ, ರಾಗಿಹಳ್ಳಿ, ಒಂಟೆಮಾರನದೊಡ್ಡಿ, ರಂಗಪ್ಪನದೊಡ್ಡಿ ಸೇರಿದಂತೆ ಹಲವು ಭಾಗಗಳಲ್ಲಿ ಕಂಡು ಬರುತ್ತದೆ.

ಅರಣ್ಯ ಇಲಾಖೆ ಹರಸಾಹಸ ಮಾಡಿದರೂ ಆನೆಗಳ ಹಾವಳಿ ಇದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ರಬ್ಬರ್‌ ವಾಲ್‌, ಸೌರಬೇಲಿ, ಆನೆ ಕಂದಕ ನಿರ್ಮಿಸಿ ಅವುಗಳನ್ನು ಕಾಡಿನಿಂದ ಹೊರಬರಂತೆ ತಡೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಹೊಸ ತಂತ್ರವನ್ನು ಕಳೆದ ವರ್ಷ ಅಳವಡಿಸಿದ್ದು ಬಹುತೇಕ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ರೈಲು ಕಂಬಿಗಳ ತಡೆಗೋಡೆ ನಿರ್ಮಿಸಲು ಸಿದ್ಧತೆ ನಡೆಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.