
ಪ್ರಜಾವಾಣಿ ವಾರ್ತೆ
ಆನೇಕಲ್: ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಹೈದರಾಬಾದ್ ನೆಹರೂ ಜೈವಿಕ ಉದ್ಯಾನಕ್ಕೆ ಸ್ಥಳಾಂತರಿಸಲು ಕ್ವಾರೆಂಟೈನ್‌ಗೆ ಸಾಗಿಸುವ ವೇಳೆ ಹೆಣ್ಣು ಕಾಡೆಮ್ಮೆ (ಗೌರ್) ಶುಕ್ರವಾರ ಮೃತಪಟ್ಟಿದೆ.
ಪ್ರಾಥಮಿಕ ಹಂತದಲ್ಲಿ ಕಾಡೆಮ್ಮೆಯನ್ನು ಕ್ವಾರೆಂಟೈನ್ ಮಾಡಿ ಆರೋಗ್ಯ ತಪಾಸಣೆಗೆ ನಡೆಸಬೇಕಿತ್ತು. ಅದಕ್ಕಾಗಿ ಕ್ರೇನ್ ಮೂಲಕ ಸಾಗಿಸುವಾಗ ಬೆಲ್ಟ್ ಹಾಕುವ ಸಮಯದಲ್ಲಿ ಗಾಬರಿ ಮತ್ತು ಉಸಿರಾಟದ ಏರುಪೇರಿನಿಂದ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.