ADVERTISEMENT

ಬೆಳಗಾವಿ | ಸಾಂಬ್ರಾದ ಎಟಿಎಂನಿಂದ ₹75,600 ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 6:43 IST
Last Updated 26 ಫೆಬ್ರುವರಿ 2025, 6:43 IST
<div class="paragraphs"><p>ಎಟಿಎಂ ಕಳವು</p></div>

ಎಟಿಎಂ ಕಳವು

   

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು, ಗ್ಯಾಸ್‌ ಕಟರ್‌ನಿಂದ ಯಂತ್ರ ಮುರಿದು ₹75,600 ಹಣ ದೋಚಿದ್ದಾರೆ.

ಕೇಂದ್ರದೊಳಗೆ ಬಂದ ಏಳೇ ನಿಮಿಷದಲ್ಲಿ ಈ ಕೃತ್ಯ ಎಸಗಿದ್ದಾರೆ. ಸಾಂಬ್ರಾ ಗ್ರಾಮದ ಮುಖ್ಯರಸ್ತೆಯಲ್ಲೇ ಈ ಎಟಿಎಂ ಕೇಂದ್ರವಿದೆ. ಇಲ್ಲಿ ಸದಾ ವಾಹನದಟ್ಟಣೆ ಮತ್ತು ಜನದಟ್ಟಣೆ ಇರುತ್ತದೆ. ಆದರೂ, ಕಳ್ಳತನ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಬುಧವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಮೂವರು ಮುಸುಕುಧಾರಿಗಳು ಗ್ಯಾಸ್‌ ಕಟರ್ ಬಳಸಿ ಈ ಕೃತ್ಯ ಎಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಬಣ್ಣದ ಸ್ಪ್ರೇ ಮಾಡಿ ಕ್ಯಾಮೆರಾ ಬಂದ್‌ಗೊಳಿಸಿದ್ದಾರೆ. ಆಗ ಬ್ಯಾಂಕ್‌ ಕಂಟ್ರೋಲ್‌ ರೂಂಗೆ ಮಾಹಿತಿ ರವಾನೆಯಾಗಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಪೊಲೀಸರು ಅಲ್ಲಿಗೆ ತೆರಳುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ’ ಎಂದರು.

‘ಈ ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಆರೋಪಿಗಳನ್ನು ಪತ್ತೆ ಮಾಡಲು ಮೂರು ತಂಡ ರಚಿಸಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.