ADVERTISEMENT

ರಕ್ತ ದಾನ ಮಾಡಿ, ಜೀವ ಉಳಿಸಿ: ಡಾ.ಪ್ರಮೋದ ಸಿಂದಗಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 13:21 IST
Last Updated 15 ಜೂನ್ 2021, 13:21 IST
ತಲ್ಲೂರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಪ್ರಮೋದ ಸಿಂದಗಿ ಮಾತನಾಡಿದರು
ತಲ್ಲೂರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಪ್ರಮೋದ ಸಿಂದಗಿ ಮಾತನಾಡಿದರು   

ತಲ್ಲೂರ: ‘ರಕ್ತದ ಅಭಾವದಿಂದ ಅನೇಕರು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ ದಾನಿಗಳು ರಕ್ತ ನೀಡಬೇಕು’ ಎಂದು ಡಾ.ಪ್ರಮೋದ ಸಿಂದಗಿ ಹೇಳಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಆರೋಗ್ಯವಂತರೆಲ್ಲರೂ ರಕ್ತ ದಾನ ಮಾಡುವುದು. ಎಷ್ಟು ಬಾರಿ ನೀಡಿದರೂ ಯಾವುದೇ ತೊಂದರೆ ಇಲ್ಲ’ ಎಂದರು.

ಮುಖಂಡ ವಿನಯಕುಮಾರ ದೇಸಾಯಿ, ‘ರಕ್ತಕ್ಕಾಗಿ ರೋಗಿಗಳ ಸಂಬಂಧಿಕರು ನಿತ್ಯ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ದಾನಕ್ಕಾಗಿ ಯುವಜನತೆಯನ್ನು ಪ್ರೇರೇಪಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ವೈದ್ಯಾಧಿಕಾರಿ ಮಲ್ಲಮ್ಮ ನೇಸರಗಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ.ಎಸ್. ಯರಗುದ್ರಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ರೇಣುಕಾ ಇಳಿಗೇರ, ಆರತಿ ಹೊಳ್ಳಿಕೇರಿ, ಹನಮಂತ ಪಚ್ಚಿನವರ, ಶಂಕರ ಲಮಾಣಿ, ಮಹಾವೀರ ಜೋಡಟ್ಟಿ, ಸಮೀರ ಗೋರೆಖಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.