ಬೆಳಗಾವಿ: ಇಲ್ಲಿನ ಬೆಳಗಾವಿ ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ವಿದ್ಯಾರ್ಥಿನಿಯರ ಪ್ರೌಢಶಾಲೆಯ ಪೂರ್ವಾ ಮುತಗೇಕರ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 613 ಅಂಕಗಳನ್ನು ಗಳಿಸಿ ಕನ್ನಡ ಮಾಧ್ಯಮದಲ್ಲಿ ನಗರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರನ್ನು ಶಿಕ್ಷಣ ಇಲಾಖೆಯಿಂದ ಬಿಇಒ ವೈ.ಜಿ. ಭಜಂತ್ರಿ ಸನ್ಮಾನಿಸಿದರು.
‘ಪೂರ್ವಾ ಕನ್ನಡದಲ್ಲಿ 125, ಗಣಿತ–100, ಹಿಂದಿ–100, ಸಮಾಜ ವಿಜ್ಞಾನ–100, ವಿಜ್ಞಾನದಲ್ಲಿ 96 ಹಾಗೂ ಇಂಗ್ಲಿಷ್–92 ಅಂಕಗಳನ್ನು ಗಳಿಸಿದ್ದಾರೆ. ಮಾತೃ ಭಾಷೆ ಮರಾಠಿಯಾದರೂ ಕನ್ನಡ ಮಾಧ್ಯಮದಲ್ಲಿ ಕಲಿತಿರುವುದು ವಿಶೇಷ’ ಎಂದು ಶಿಕ್ಷಕರು ತಿಳಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ರಾಜಶೇಖರ ಚಳಗೇರಿ, ಮುಖ್ಯಶಿಕ್ಷಕ ಎಂ.ಕೆ. ಮಾದಾರ ಹಾಗೂ ಬಿ.ಸಿ. ಸವಣೂರ, ನಗರ ವಲಯದ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಪರ್ವೀನ್ ನದಾಫ, ಸಿ.ಆರ್.ಪಿ. ಸಂಜಯ ಪಾಟೀಲ, ಎಚ್.ಎ. ಮುಲ್ಲಾ ಹಾಗೂ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.