ADVERTISEMENT

ಹಲ್ಲೆ ಪ್ರಕರಣ ಸಂಬಂಧ FIR ದಾಖಲು: ಇದು ರಾಜಕೀಯ ವಿರೋಧಿಗಳ ಕೃತ್ಯ ಎಂದ ಚಿದಾನಂದ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 12:51 IST
Last Updated 5 ಜನವರಿ 2026, 12:51 IST
<div class="paragraphs"><p>ಶಾಸಕ ಲಕ್ಷ್ಮಣ ಸವದಿ ಮತ್ತು ಚಿದಾನಂದ&nbsp;ಸವದಿ </p></div>

ಶಾಸಕ ಲಕ್ಷ್ಮಣ ಸವದಿ ಮತ್ತು ಚಿದಾನಂದ ಸವದಿ

   

ಅಥಣಿ: ‘ಹಲ್ಲೆ ಪ್ರಕರಣ ಸಂಬಂಧ ನನ್ನ ಮತ್ತು ತಂದೆಯವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಆದರೆ, ಈವರೆಗೂ ನೋಟಿಸು ಬಂದಿಲ್ಲ. ಬಂದರೆ ಕಾನೂನಿಗೆ ತಲೆಬಾಗಿ ತನಿಖೆಗೆ ಸಹಕರಿಸುತ್ತೇವೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ, ಹಲ್ಲೆಗೆ ಒಳಗಾದವರಿಗೆ ಪ್ರಚೋದನೆ ನೀಡಿ, ನಮ್ಮ ಮನೆಗೆ ಕಳುಹಿಸಿದವರು ಯಾರು ಎಂಬುದು ತನೆಖೆಯಾಗಬೇಕು’ ಎಂದು ಮುಖಂಡ ಚಿದಾನಂದ ಸವದಿ ಆಗ್ರಹಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂದೆ ಲಕ್ಷ್ಮಣ ಸವದಿ ಅವರ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಆರೋಪ ಬಂದಿಲ್ಲ. ಸಂಚು ರೂಪಿಸಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜಕೀಯ ವಿರೋಧಿಗಳು ಮಾಡಿದ ಕೃತ್ಯ ಇದಾಗಿದೆ’ ಎಂದು ಆಪಾದಿಸಿದರು.

ADVERTISEMENT

‘ನಿಂಗಪ್ಪ ಕರೆಣ್ಣವರ ಅವರನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿಸಿದ್ದೆ ನಮ್ಮ ತಂದೆ.  ಆದರೆ, ತಂದೆಗೆ ಏಕವಚನದಲ್ಲಿ ಮಾತನಾಡಿದ ಕಾರಣ, ಅವರನ್ನು ನಮ್ಮ ಬೆಂಬಲಿಗರು ತಳ್ಳಾಡಿದ್ದಾರೆ. ಆಗ ಟೇಬಲ್ ಬಡಿದು ಕಾರಣ ತಲೆಗೆ ಗಾಯವಾಗಿದೆ’ ಎಂದರು.

‘ಅಥಣಿಯಲ್ಲಿ ಲಕ್ಷ್ಮಣ ಐಗಳಿ ಎಂಬ ಅಬಕಾರಿ ನಿರೀಕ್ಷಕರು ಇದ್ದರು. ಅವರ ಕೊಲೆ ಹೇಗೆ ಆಯಿತೆಂದು 24 ತಾಸಿನೊಳಗೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ತಿಳಿಸಿಬೇಕು. ಅವರಿಗೆ ಗೊತ್ತಿರದಿದ್ದರೆ, ತಮ್ಮ ಗುರುಗಳನ್ನು ಕೇಳಿ ಇತಿಹಾಸ ತಿಳಿಸಬೇಕು. ನಂತರ ಅಥಣಿಯು ಬಿಹಾರ ಆಗುತ್ತಿದೆಯೋ ಅಥವಾ ಉತ್ತರ ಪ್ರದೇಶ ಆಗುತ್ತಿದೆಯೋ’ ಎಂದು ತಿಳಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.