
ಅಥಣಿ (ಬೆಳಗಾವಿ ಜಿಲ್ಲೆ): ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರ ವಿರುದ್ಧ ಅಥಣಿ ಠಾಣೆಯಲ್ಲಿ ಭಾನುವಾರ ತಡರಾತ್ರಿ ದೂರು ದಾಖಲಾಗಿದೆ.
'ನಾಲ್ಕು ಜನ ಸೇರಿಕೊಂಡು ಲಕ್ಷ್ಮಣ ಸವದಿ ಅವರ ಮನೆಗೆ ಹೋಗಿದ್ದೆವು. ಆಗ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸುವ ಜತೆಗೆ, ನನಗೆ ಕಪಾಳಮೋಕ್ಷ ಮಾಡಿದರು. ಅವರ ಪುತ್ರ ಚಿದಾನಂದ ಸೊಂಟಕ್ಕೆ ಒದ್ದರು. ಏಳೆಂಟು ಜನ ಬೆಂಬಲಿಗರೆಲ್ಲ ಕೂಡಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದರು' ಎಂದು ನಿಂಗಪ್ಪ ಕರೆಣ್ಣವರ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.