ADVERTISEMENT

ಬೆಳಗಾವಿ |ಇಂದು ಗಣೇಶ ವಂದನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 5:26 IST
Last Updated 4 ಸೆಪ್ಟೆಂಬರ್ 2025, 5:26 IST
   

ಬೆಳಗಾವಿ: ರಾಷ್ಟ್ರೀಯ ಸ್ವಯಂ ಸೇವಕಸಂಘ ಬೆಳಗಾವಿ ನಗರದ ಘಟಕದಿಂದ ಸೆ.4ರಂದು ಸಂಜೆ 6ಕ್ಕೆ ನಗರದ 25ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ‘ಗಣೇಶ ವಂದನ’ ಕಾರ್ಯಕ್ರಮ ಜರುಗಲಿದೆ.

ಏಕಕಾಲದಲ್ಲಿ ಪ್ರತ್ಯೇಕವಾಗಿ ಎರಡು ತಂಡಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಘೋಷ (ಸಂಗೀತ ವಾದ್ಯ) ನುಡಿಸುವುದರ ಮೂಲಕ ಗಣೇಶ ವಂದನ ಕಾರ್ಯಕ್ರಮ ಪ್ರಾರಂಭವಾಗುವುದು. 

ಮೊದಲ ತಂಡದಿಂದ ರಾಮನಗರ, ವೈಭವ ನಗರ (ಗಣಪತಿ ಮಂದಿರ), ಬಸವ ಕಾಲೊನಿ, ಕುಮಾರಸ್ವಾಮಿ ಲೇಔಟ್, ಗಣೇಶ ನಗರ, ಚವಾಟಗಲ್ಲಿ, ಗಣಾಚಾರಿ ಗಲ್ಲಿ, ಗೋಂಧಳಿ ಗಲ್ಲಿಯಲ್ಲಿ ಗಣೇಶ ವಂದನ ಜರುಗುವುದು. ಎರಡನೇ ತಂಡದಿಂದ ವಿಠ್ಠಲ ದೇವಗಲ್ಲಿ, ವರದಪ್ಪಗಲ್ಲಿ, ಜುನೆ ಬೆಳಗಾವಿ, ಕಾರಬಾರಗಲ್ಲಿ, ಸಂಭಾಜಿ ನಗರ (ಯಳ್ಳೂರ ಕ್ರಾಸ್), ಅನಗೋಳದ ಕನಕದಾಸ ಕಾಲನಿ, ಅನಗೋಳದ ಸಂಭಾಜಿ ಚೌಕ್, ಟಿಳಕವಾಡಿಯ ಮೊದಲ ರೈಲ್ವೆ ಗೇಟ್, ಕ್ಯಾಂಪಿನ ಪೊಲೀಸ್ ಠಾಣೆ ಮತ್ತು ತೆಲುಗು ಕಾಲನಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಜರುಗುವುದು.

ADVERTISEMENT

ಎರಡೂ ತಂಡಗಳು ಒಗ್ಗೂಡಿ ಖಡೇಬಜಾರ್‌, ಗಾಂಧಿನಗರ, ಕಾಮತಗಲ್ಲಿ, ಖಾಂದಾ ಮಾರ್ಕೆಟ್, ತಿಲಕಚೌಕ್, ತಹಶೀಲ್ದಾರ ಗಲ್ಲಿ ಮತ್ತು ಶ್ಯಾಮಪ್ರಸಾದ ಮುಖರ್ಜಿ ರಸ್ತೆ (ಪ್ರಕಾಶ ಟಾಕೀಸ್ ಹತ್ತಿರ) ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ ಗಣೇಶ ವಂದನ ಸಲ್ಲಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಅಮಿತ್ (8310100358) ಅಥವಾ ಅರುಣ (9738224368) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.